CINE | ಕಿರಾಣಿ ಅಂಗಡಿಯಲ್ಲಿ ಪತ್ನಿಗೆ ಐಸ್‌ಕ್ರೀಂ ಕೊಡಿಸಿದ ರಾಕಿಂಗ್ ಸ್ಟಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬ ನಿನ್ನೆ ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದೆ.

ಈ ವೇಳೆ ಕಿರಾಣಿ ಅಂಗಡಿಯಲ್ಲಿ ಯಶ್ ಐಸ್‌ಕ್ರೀಂ ಖರೀದಿ ಮಾಡಿ ಪತ್ನಿಗೆ ನೀಡಿದ್ದಾರೆ. ಈ ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ರಾಕಿಂಗ್ ಸ್ಟಾರ್ ಸರಳತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಟಾರ‍್ಸ್ ಆದರೇನು, ಅವರಿಗೂ ಎಲ್ಲರಂತೆ ಜೀವಿಸುವ ಕ್ಷಣ ಸಿಕ್ಕಿದೆ, ಫ್ಯಾನ್ಸ್ ಮುತ್ತಿಗೆ ಇಲ್ಲದೆ ಸಾಮಾನ್ಯರಂತೆ ಅಂಗಡಿ ಮುಂದೆ ಕುಳಿತು ಸಮಯ ಕಳೆದಿದ್ದಾರೆ.

ರಾಧಿಕಾ, ರಾಧಿಕಾ ತಂದೆ, ತಾಯಿ, ಮಗ ಯಥರ್ವ್, ಮಗಳು ಐರಾ ಆಗಮಿಸಿದ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!