ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಡಕ್ ಜಿಲ್ಲೆಯ ಮಿಲಿಟರಿ ಕಾಲೋನಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಭಾರೀ ಮಳೆಗೆ ಮನೆಯ ಛಾವಣಿ ಕುಸಿದುಬಿದ್ದಿದ್ದು, ತಾಯಿಯ ಗರ್ಭದಲ್ಲಿದ್ದ ಕಂದಮ್ಮ ಮೃತಪಟ್ಟಿದೆ.
ತಾಯಿ ಸ್ಥಿತಿ ಕೂಡ ಗಂಭೀರವಾಗಿದೆ, ಯಾಸ್ಮಿನ್ ಎಂಬಾಕೆ ಹೆರಿಗೆಗಾಗಿ ತವರು ಮನೆಗೆ ಬಂದಿದ್ದರು. ಇನ್ನೇನು 15 ದಿನಗಳಲ್ಲಿ ಕಂದಮ್ಮ ಜಗತ್ತನ್ನು ನೋಡಬೇಕಿತ್ತು. ಆದರೆ ಛಾವಣಿ ಕುಸಿತಕ್ಕೆ ಮಗು ಮೃತಪಟ್ಟಿದೆ.
ಯಾಸ್ಮಿನ್ ಮಲಗಿದ್ದ ವೇಳೆ ಏಕಾಏಕಿ ಛಾವಣಿ ಮೇಲೆ ಬಿದ್ದಿದೆ, ಯಾಸ್ಮಿನ್ ಹೊಟ್ಟೆಗೆ ಹೊಡೆತ ಬಿದ್ದಿದೆ, ಯಾಸ್ಮಿನ್ ತಾಯಿ ಕೂಡ ಗಂಭೀರವಾಗಿ ಕಾಯಗೊಂಡಿದ್ದಾರೆ. ವೈದ್ಯರು ಗರ್ಭದಲ್ಲಿರುವ ಭ್ರೂಣ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.