Friday, December 9, 2022

Latest Posts

ಕಡಲೆಕಾಯಿ‌ ಪರಿಷೆಗೆ ಬಂದು ಪೊಲೀಸರಿಗೆ ಸಿಕ್ಕಿಬಿದ್ದ ರೌಡಿಶೀಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಡಲೆಕಾಯಿ‌ ಪರಿಷೆಗೆ ಬಂದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ ರೌಡಿಶೀಟರ್​​ನನ್ನು ಬೆಂಗಳೂರಿನ ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ‌.‌

ಬೆಂಗಳೂರಿನ ಕೆ.ಜಿ ನಗರ ನಿವಾಸಿಯಾಗಿರುವ ರೌಡಿಶೀಟರ್‌ ಪೃಥಿಕ್ 2019ರಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ‌. ಕೆಲ ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ. ವಿಚಾರಣೆಗೆ ಹಾಜರಾಗಲು ಹಲವು ಬಾರಿ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ತಲೆಮರೆಸಿಕೊಂಡಿದ್ದನು.

ಆದರೆ ಆತ ಕಡಲೆಕಾಯಿ ಪರಿಷೆಗೆ ರೌಡಿಶೀಟರ್ ಬರುತ್ತಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರಿಂದ ಹೊಂಚು ಹಾಕಿದ್ದ ಪೊಲೀಸರುರೌಡಶೀಟರ್​​ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!