Sunday, December 3, 2023

Latest Posts

ನಾಳೆ ಈ ವರ್ಷದ ಎರಡನೇ ಚಂದ್ರಗ್ರಹಣ: ಯಾವ್ಯಾವ ದೇಶಗಳಲ್ಲಿ ಗೋಚರಿಸಲಿದೆ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂದು ಶಾಸ್ತ್ರ, ಪುರಾಣಗಳಲ್ಲಿ ಗ್ರಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ವರ್ಷ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣಗಳು ಸಂಭವಿಸಲಿವೆ. ಈ ನಡುವೆ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 14 ರಂದು ಪೂರ್ಣಗೊಂಡಿದ್ದು, ಭಾರತದಲ್ಲಿ ಗೋಚರ ಆಗಲಿಲ್ಲ. 2ನೇ ಚಂದ್ರಗ್ರಹಣ ಅಕ್ಟೋಬರ್ 28ರಂದು, ನಾಳೆ ಸಂಭವಿಸಲಿದೆ.

ಇದು ವರ್ಷದ ಕೊನೆಯ ಚಂದ್ರಗ್ರಹಣ. ಚಂದ್ರಗ್ರಹಣವು ಅಕ್ಟೋಬರ್ 28 ರಂದು ಅಂದರೆ ಶನಿವಾರ ರಾತ್ರಿ 11:31 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 29 ರಂದು ಮಧ್ಯಾಹ್ನ 1:45 ಕ್ಕೆ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಮಧ್ಯಾಹ್ನ 3.36ಕ್ಕೆ ಚಂದ್ರಗ್ರಹಣ ಮುಕ್ತಾಯವಾಗಲಿದೆ.

ಈ ಹಿನ್ನೆಲೆಯಲ್ಲಿ ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ, ಏಷ್ಯಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರದ ಕೆಲವು ಭಾಗಗಳಲ್ಲಿ ಈ ಗ್ರಹಣ ಗೋಚರಿಸಲಿದೆ. ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಚಂದ್ರಗ್ರಹಣ ಗೋಚರವಾಗಲಿದೆ. ಈ ಗ್ರಹಣವನ್ನು ನೋಡಲು ಯಾವುದೇ ಉಪಕರಣದ ಅಗತ್ಯವಿಲ್ಲ, ಅಷ್ಟು ಸ್ಪಷ್ಟವಾಗಿ ಗ್ರಹಣ ಗೋಚರವಾಗಲಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!