October 19, 2026
Monday, October 19, 2026
spot_img

ಕುಡಿಯೋದಕ್ಕೆ ಹಣ ಕೊಟ್ಟಿಲ್ಲ ಅಂತ ವೃದ್ಧ ತಾಯಿಯನ್ನು ಹ*ತ್ಯೆಗೈದ ಪಾಪಿ ಪುತ್ರ! ಸುಮ್ನೆ ಬಿಡ್ತಾರಾ ಪೊಲೀಸ್ರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ವೃದ್ಧ ತಾಯಿಯನ್ನೇ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಉದ್ಗೀರ್ ತಹಸಿಲ್‌ನ ಕರ್ಖೇಲಿ ಗ್ರಾಮದಲ್ಲಿ ನಡೆದ ಈ ಪ್ರಕರಣ ಸಂಬಂಧ 45 ವರ್ಷದ ಸೈಲಾನಿ ಬಕ್ಷುದ್ದೀನ್ ಮುಂಜೇವರ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗೆ ಮದ್ಯದ ಚಟವಿದ್ದು, ಆತ ಪದೇಪದೆ ತನ್ನ 65 ವರ್ಷದ ತಾಯಿ ಯಾಸಿನ್‌ಬಿಯಿಂದ ಹಣ ಕೇಳುತ್ತಿದ್ದ. ಸೋಮವಾರ ರಾತ್ರಿ ಕೂಡ ಮದ್ಯಕ್ಕಾಗಿ ಹಣ ಕೇಳಿದಾಗ ತಾಯಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿಯು ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆಯನ್ನು ನೆಲಕ್ಕೆ ಹಲವು ಬಾರಿ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿ, ಸ್ಥಳದಲ್ಲೇ ವೃದ್ಧ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ನಂತರ ಮನೆ ಅಂಗಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಕುಟುಂಬಸ್ಥರು ನೋಡಿದ್ದಾರೆ. ಈ ಕುರಿತು ಮೃತಳ ಪತಿ ನೀಡಿದ ದೂರಿನ ಆಧಾರದ ಮೇಲೆ ಉದ್ಗೀರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Must Read