Thursday, March 23, 2023

Latest Posts

SHOCKING | ಎಲೆಕ್ಟ್ರಿಕ್ ಹೀಟರ್ ಮೈಮೇಲೆ ಬೀಳಿಸಿಕೊಂಡ ಮಗ, ಉಳಿಸಲು ಹೋದ ತಾಯಿಯೂ ಸಾವು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಟರ್ ಹೀಟರ್‌ನಿಂದ ಕರೆಂಟ್ ಶಾಕ್ ಹೊಡೆದು ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಆತನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ಶಾಕ್ ಹೊಡೆದಿದ್ದು, ತಾಯಿ ಮಗ ಇಬ್ಬರೂ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ಘಟನೆ ನಡೆದಿದ್ದು, ತಾಯಿ ಜ್ಯೋತಿ ಹಾಗೂ ಮಗ ಜಯಾನಂದ್ ಮೃತಪಟ್ಟಿದ್ದಾರೆ.

ಶೌಚಾಲಯದಲ್ಲಿ ಜ್ಯೋತಿ ನೀರು ಕಾಯಿಸಲು ಹೀಟರ್ ಇಟ್ಟಿದ್ದು, ಜಯಾನಂದ್ ಶೌಚಾಲಯಕ್ಕೆ ತೆರಳಿದ್ದಾರೆ. ಹೀಟರ್ ಮೈ ಮೇಲೆ ಬೀಳಿಸಿಕೊಂಡು ಒದ್ದಾಡಿದ್ದಾನೆ. ತಕ್ಷಣ ತಾಯಿ ಹೋಗಿದ್ದು, ಮಗನನ್ನು ರಕ್ಷಿಸಲು ಯತ್ನಿಸಿದ್ದಾರೆ. ಅವರಿಗೂ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!