July 21, 2026
Tuesday, July 21, 2026
spot_img

ಹೊಸ ದಾಖಲೆ ಸೃಷ್ಟಿಸಿದ ʼಬ್ರಹ್ಮಕಲಶʼ ಗೀತೆ, ಇನ್ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಅಧಿಕ ರೀಲ್ಸ್‌ಗಳಲ್ಲಿ ಬಳಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ ಒನ್‌ ಸಿನಿಮಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಸಿನಿಮಾದ ಬ್ರಹ್ಮಕಲಶ ಹಾಡು ಜನರ ಮನಸ್ಸನ್ನು ಮುಟ್ಟಿತ್ತು. ಇದೀಗ ಇದೇ ಹಾಡು ಗ್ಲೋಬಲ್‌ ಆಗಿ ಫೇಮಸ್‌ ಆಗಿದ್ದು, ಹೊಸ ದಾಖಲೆ ಸೃಷ್ಟಿಸಿದೆ.

ಈ ಹಾಡು ಇನ್‌ಸ್ಟಾಗ್ರಾಮ್‌ನಲ್ಲಿ 10 ಲಕ್ಷಕ್ಕೂ ಅಧಿಕ ರೀಲ್ಸ್‌ಗಳಲ್ಲಿ ಬಳಸಲ್ಪಟ್ಟ ಮೊದಲ ಕನ್ನಡ ಚಲನಚಿತ್ರ ಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಟ್ರ್ಯಾಕ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಟ್ರೆಂಡಿಂಗ್ ಆಗುತ್ತಿದೆ.ಪ್ರಪಂಚದಾದ್ಯಂತ ಒಂದು ದೈವಿಕ ಅಲೆ. ಪವಿತ್ರ ಮಂತ್ರಗಳು ಎಲ್ಲೆಡೆ ಪ್ರತಿಧ್ವನಿಸುತ್ತಲೇ ಇವೆ, ಇನ್‌ಸ್ಟಾದಲ್ಲಿ 1 ಮಿಲಿಯನ್+ ರೀಲ್‌ಗಳನ್ನು ದಾಟಿ ಈ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಮೊದಲ ಕನ್ನಡ ಗೀತೆಯಾಗಿದೆ ಎಂದು ಹೊಂಬಾಳೆ ಪೋಸ್ಟ್‌ ಶೇರ್‌ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !