ಹೊಸದಿಗಂತ ವರದಿ,ವಿಜಯನಗರ:
ಇತ್ತೀಚೆಗೆ ನಡೆದ ಮೈಲಾರ ಜಾತ್ರೆ ಕಾರ್ಣಿಕೋತ್ಸವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಂಬ್ಯುಲೆನ್ಸ್ ನಲ್ಲಿ ಇಲಾಖೆ ಸಿಬ್ಬಂದಿ ತಮ್ಮ ಸಂಬoಧಿಕರನ್ನು ಕರೆತರುವ ಮೂಲಕ ತುರ್ತು ಸೇವಾ ವಾಹನ ದುರುಪಯೋಗವಾಗುವುದನ್ನು ಎಸ್ಪಿ ಡಾ.ಶ್ರೀಹರಿಬಾಬು ಬಿ.ಎಲ್. ಪತ್ತೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಲಕ್ಷಾoತರ ಜನ ಸೇರಿದ ಜಾತ್ರೆಯಲ್ಲಿ ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್ ಪದೇ ಪದೇ ಸೈರನ್ ಹಾಕಿಕೊಂಡು ಸಂಚರಿಸುತ್ತಿತ್ತು. ತುರ್ತು ಸೇವಾ ವಾಹನ ಬರುತ್ತಿದ್ದಂತೆ ಪೊಲೀಸರು ತರಾತುರಿಯಲ್ಲಿ ಜನರನ್ನು ಸರಿಸಿ, ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುತ್ತಿದ್ದರು. ಆದರೆ, ಅಂಬುಲೆನ್ಸ್ ಪದೇ ಪದೇ ಸೈರನ್‌ನೊಂದಿಗೆ ಸಂಚರಿಸುತ್ತಿದ್ದರಿoದ ಅನುಮಾನಗೊಂಡ ಎಸ್ಪಿ ಡಾ.ಶ್ರೀಹರಿಬಾಬು ಅವರು ವಾಹನ ತಡೆದು, ತಪಾಸಣೆ ನಡೆಸಿದ್ದಾರೆ.
ಈ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಸಂಬoಧಿಕರನ್ನು ಅಂಬುಲೆನ್ಸ್ನಲ್ಲಿ ಜಾತ್ರೆಗೆ ಕರೆತರುವ ಮೂಲಕ ಸರ್ಕಾರಿ ವಾಹನವನ್ನು ದುರುಪಯೋಗ ಪಡೆಸಿಕೊಂಡಿರುವುದು ದೃಢಪಟ್ಟಿದೆ.
ಈ ಕುರಿತು ಎಸ್ಪಿ ಶ್ರೀಹರಿ ಬಾಬು ಅವರು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರಿಂದ ಸಂಬoಧ ಪಟ್ಟವರಿಗೆ ಕೂಡಲೇ ನೊಟಿಸ್ ನೀಡಿ, ದಂಡ ವಸೂಲಿ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಿರ್ದೇಶನ ನೀಡಿದರು.