ಏಪ್ರಿಲ್‌ ತಿಂಗಳಲ್ಲಿ ಈ ಮೂರುದಿನ ಷೇರುಪೇಟೆ ಕ್ಲೋಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು (ಏಪ್ರಿಲ್‌ 4) ಮಹಾವೀರ ಜಯಂತಿ ಪ್ರಯುಕ್ತ ಬಿಎಸ್‌ಇ ಹಾಗು ಎನ್‌ಎಸ್‌ಇ ವ್ಯಾಪಾರ ವಹಿವಾಟು ನಡೆಸುವುದಿಲ್ಲ. ಮುಚ್ಚಲಾಗಿದೆ. ದೇಶದ ಪ್ರಮುಖ ಸರಕು ವಿನಿಮಯ, MCXನಲ್ಲಿಯೂ ಸಹ ಮೊದಲ ವ್ಯಾಪಾರ ಸೆಷನ್‌ ನಡೆಯುವುದಿಲ್ಲ. ಈಕ್ವಿಟಿ ವಿಭಾಗ, ಎಸ್‌ಎಲ್‌ಬಿ ವಿಭಾಗ, ಈಕ್ವಿಟಿ ಉತ್ಪನ್ನ ವಿಭಾಗ, ಬಡ್ಡಿ ದರದ ಉತ್ಪನ್ನಗಳ ವಿಭಾಗ ಮತ್ತು ಕರೆನ್ಸಿ ಉತ್ಪನ್ನಗಳ ವಿಭಾಗಗಳೂ ಸಹ ವ್ಯಾಪಾರದಿಂದ ಮುಕ್ತವಾಗಿರಲಿವೆ

ಇದಲ್ಲದೇ ಏಪ್ರಿಲ್‌ ತಿಂಗಳಲ್ಲಿ ವಾರಾಂತ್ಯಗಳ ಹೊರತಾಗಿ ಮೂರುದಿನ ಭಾರತೀಯ ಷೇರುಪೇಟೆಗಳು ಬಂದ್‌ ಆಗಿರಲಿವೆ ಎಂದು BSE ವೆಬ್‌ಸೈಟ್ ಪ್ರಕಟಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಏಪ್ರಿಲ್ 4 ರಂದು ಮಹಾವೀರ ಜಯಂತಿ, ಏಪ್ರಿಲ್ 7 ರಂದು ಗುಡ್ ಫ್ರೈಡೆ ಮತ್ತು ಏಪ್ರಿಲ್ 14 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ವ್ಯಾಪಾರವನ್ನು ಸ್ಥಗಿತಗೊಳಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!