ಸಾಮಾನ್ಯವಾಗಿ ಎಷ್ಟೇ ವರ್ಕೌಟ್ ಮಾಡಿದ್ರೂ ಹೊಟ್ಟೆ ಮಾತ್ರ ಕರಗೋದಿಲ್ಲ. ಅದರಲ್ಲೂ ಮಹಿಳೆಯರಿಗೆ ಹೊಟ್ಟೆ ಹಾಗೂ ಅದರ ಸುತ್ತಲಿನ ಬೊಜ್ಜನ್ನು ಕಡಿಮೆ ಮಾಡೋದು ತುಂಬಾನೇ ಕಷ್ಟ. ಬಟ್ ಈ ಅಂಶವನ್ನು ಗಮನಿಸಿ ನೋಡಿ.. ನಿಮ್ಮ ತೂಕ ಹೆಚ್ಚಿಲ್ಲ, ನಿಮ್ಮ ಹೊಟ್ಟೆ ಹೆಚ್ಚಿಲ್ಲ. ಬಟ್ ಬ್ಲೋಟ್ ಆಗಿರಬಹುದು. ದೇಹದಲ್ಲಿನ ಕೆಟ್ಟ ಅಂಶಗಳು ಹೊರಹೋಗದೇ ಅಲ್ಲೇ ಇರಬಹುದು. ಅದಕ್ಕಾಗಿ ಡೀಟಾಕ್ಸ್ ಮಾಡಿ. ಏನಿದು ಈ ಡಿಟಾಕ್ಸ್ ವಾಟರ್? ಈ ಡಿಟಾಕ್ಸ್ ವಾಟರ್ ಕುಡಿಯುವುದರ ಲಾಭ ಏನು ತಿಳಿಯೋಣ ಬನ್ನಿ..
ಈ ಡಿಟೆಕ್ಸ ವಾಟರ್ ಬಿಸಿಲಿಗೆ ಮತ್ತುಉಷ್ಣ ಪ್ರವೃತ್ತಿಯ ದೇಹ ಇದ್ದವರು ಈ ನೀರನ್ನು ಕುಡಿಯುವುದರಿಂದ ತುಂಬ ಉಪಯೋಗವಿದೆ.
ಮೂರು ಲೀಟರ್ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ನಿಂಬೆಹಣ್ಣನ್ನು ಸ್ಲೈಸ್ಸ್ ಮಾಡಿ ಹಾಕಿ ಒಂದು ಎಸಳು ಕರಿಬೇವು ಹಾಕಿ.
ಅರ್ಧ ಸೌತೆಕಾಯಿ ಹೆಚ್ಚಿ ಹಾಕಿ ಒಂದು ಇಂಚು ಶುಂಠಿ ಹೆಚ್ಚಿ ಹಾಕಿ ಒಂದು ಎರಡು ಗರಿ ಪುದಿನ ಹಾಕಿ ಒಂದು ಗಂಟೆ ಬಿಟ್ಟು ಇಡೀದಿನ ಈ ನೀರನ್ನು ಕುಡಿಯಿರಿ. ಇದು ಗ್ಯಾಸ್ಟಿಕ್‌ಗೆ ಕೂಡ ಒಳ್ಳೆಯದು.
ಸೌತೆಕಾಯಿ, ಪೈನಾಪಲ್‌ನ್ನು ಮಿಕ್ಸಿ ಮಾಡಿ ಅದರ ಜ್ಯೂಸ್ ಕುಡಿದರೆ ಟಾಕ್ಸಿನ್ಸ್ ಹೊರಹೋಗುತ್ತದೆ.
ಸೇಬು, ಶುಂಠಿ ಹಾಗೂ ನಿಂಬೆಹುಳಿ, ಉಪ್ಪು ಹಾಕಿ ಜ್ಯೂಸ್ ಮಾಡಿ ಕುಡಿದರೆ ಕಲ್ಮಶ ಹೊರಬರುತ್ತದೆ.