Monday, October 2, 2023

Latest Posts

ʻವಿಕ್ಟೋರಿಯಾʼ ಹೆಸರು ಪಡೆದ ಕೊಡಗಿನ ರಾಜಕುಮಾರಿ ದುರಂತ ಜೀವನದ ಕತೆಯಿದು!

ತ್ರಿವೇಣಿ ಗಂಗಾಧರಪ್ಪ

ಬಕಿಂಗ್ಹ್ಯಾಮ್ ಅರಮನೆಯ ಬಿಳಿಯರಲ್ಲದ ವ್ಯಕ್ತಿಗಳ ವರ್ತನೆಯನ್ನು ಎತ್ತಿ ತೋರಿಸುವಲ್ಲಿ ಆಕೆಯ ಅಸ್ತಿತ್ವವು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸಿತ್ತು. ಕೊಡಗಿನ (ಕೂರ್ಗ್) ಕೊನೆಯ ರಾಜ ಚಿಕವೀರ ರಾಜೇಂದ್ರನ ಮಗಳು ವಿಕ್ಟೋರಿಯಾ ಗೌರಮ್ಮ ಅವರ ಜೀವನದ ದುರಂತ ಕತೆಯನ್ನೊಮ್ಮೆ ತಿಳಿಯಲೇಬೇಕು.

ಕೂರ್ಗ್‌ ಯುದ್ಧ
24 ಏಪ್ರಿಲ್ 1834 ರಂದು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕೂರ್ಗ್ ಯುದ್ಧದಲ್ಲಿ ಸೋತ ಚಿಕವೀರ ರಾಜೇಂದ್ರನನ್ನು ಪದಚ್ಯುತಗೊಳಿಸಲಾಯಿತು. ಸೇನಾ ಅಧಿಕಾರಿ ಜೇಮ್ಸ್ ಸ್ಟುವರ್ಟ್ ಫ್ರೇಸರ್ ಅವರ ಆದೇಶದ ಅಡಿಯಲ್ಲಿ, ರಾಜ್ಯವನ್ನು ಬ್ರಿಟಿಷರು ತಮ್ಮ ತೆಕ್ಕೆಗೆ ತೆಗದುಕೊಂಡರು. ರಾಜನನ್ನು ಬನಾರಸ್‌ನಲ್ಲಿ ರಾಜಕೀಯ ಖೈದಿಯಾಗಿ ಸುಮಾರು 14 ವರ್ಷಗಳನ್ನು ಕಳೆಯಬೇಕಾಯಿತು.  1852 ರಲ್ಲಿ, 11 ವರ್ಷದ ತನ್ನ ಕಿರಿ ಮಗಳು ಗೌರಮ್ಮನೊಂದಿಗೆ ಲಂಡನ್‌ಗೆ ಪ್ರಯಾಣಿಸಿ ಬ್ರಿಟಿಷ್ ಸರ್ಕಾರವು ತನ್ನ ಪೂರ್ವಜರ ಸಂಪತ್ತನ್ನು ಹಿಂದಿರುಗಿಸಬೇಕೆಂದು ಮತ್ತು ಅವನ ಮಗಳಿಗೆ ಕ್ರಿಶ್ಚಿಯನ್ ಧರ್ಮದ ಅಡಿಯಲ್ಲಿ ಆರೈಕೆ ಮತ್ತು ಸುರಕ್ಷಿತ ಭವಿಷ್ಯವನ್ನು ಒದಗಿಸಬೇಕೆಂದು ಒತ್ತಾಯಿಸಿದನು.

ಇಬ್ಬರೂ ಬ್ರಿಟನ್‌ನ ಟರ್ಫ್‌ಗೆ ಆಗಮಿಸಿದ ಮೊದಲ ಭಾರತೀಯರಾಗಿದ್ದರು. ಮೊದಲು ಗೌರಮ್ಮ ಅವರ ಭವಿಷ್ಯವನ್ನು ರೂಪಿಸಿ ನಂತರ ಅವರ ನ್ಯಾಯಯುತ ಆಸ್ತಿಗಾಗಿ ಹೋರಾಡಲು ಸಿದ್ದರಾದರು.

ಗೌರಮ್ಮನ ಬಾಲ್ಯ

ಜುಲೈ 4, 1841ರಲ್ಲಿ ಕೊಡಗಿನ ರಾಜನಾಗಿದ್ದ ಚಿಕ್ಕ ವೀರರಾಜೇಂದ್ರನ ಮಗಳಾಗಿ ಬನಾರಸ್‌ನಲ್ಲಿ ಜನಿಸಿದರು. ತಾನು ಹುಟ್ಟಿ ಮೂರೇ ದಿನದಲ್ಲಿ ಗೌರಮ್ಮ ತನ್ನ ತಾಯಿಯನ್ನು ಕಳೆದುಕೊಂಡಳು. ಮಾರ್ಚ್ 1852ರಲ್ಲಿ, ಈಸ್ಟ್ ಇಂಡಿಯಾ ಸರ್ಕಾರವು ತನ್ನ ಸಂಪತ್ತನ್ನು ಹಿಂದಿರುಗಿಸಬೇಕೆಂದು ನ್ಯಾಯಾಲಯದಲ್ಲಿ ಒತ್ತಾಯಿಸುವ ಇರಾದೆಯಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿದ. ಅಲ್ಲಿನ ರಾಣಿ ವಿಕ್ಟೋರಿಯಾಳ ರಾಜೋಪಚಾರಗಳನ್ನು ಸ್ವೀಕರಿಸಿ, ತನ್ನ ಮಕ್ಕಳಲ್ಲೇ ತುಸು ಹೆಚ್ಚು ಬೆಳ್ಳಗಿದ್ದ 11 ವರ್ಷದ ಮಗಳಾದ ಗೌರಮ್ಮನನ್ನು “ಕಾಗೆಗಳ ಗುಂಪಿನ ಪಾರಿವಾಳ” ಎಂದು ಹೊಗಳಿ ರಾಣಿಯ ಆಶ್ರಯದಲ್ಲಿಟ್ಟನು.

ಬಕಿಂಗ್‌ಹ್ಯಾಮ್ ಅರಮನೆಯಲ್ಲಿ, 1852ರ ಜುಲೈ 5 ರಂದು ರಾಣಿಯ ಪ್ರಾಯೋಜಕತ್ವದಲ್ಲಿ, ಗೌರಮ್ಮಗೆ “ವಿಕ್ಟೋರಿಯಾ” ಎಂಬ ನಾಮಕರಣದೊಂದಿಗೆ ಕ್ರೈಸ್ತ ದೀಕ್ಷಾಸ್ನಾನ ನೀಡಿದರು. ಹೀಗೆ ಕ್ರೈಸ್ತ ಧರ್ಮಕ್ಕೆ ಪರಿವರ್ತನೆಗೊಂಡ ಮೊದಲ ಭಾರತೀಯ ರಾಜಕುಮಾರಿಯಾಗಿದ್ದಳು. ಅಂದು ಮಹಾರಾಣಿ ಚರ್ಮದ ಹೊದಿಕೆಯ ಸ್ವಂತ ಹಸ್ತಾಕ್ಷರವಿರುವ ಬೈಬಲ್ ಮತ್ತು ಹಲವಾರು ಆಭರಣಗಳನ್ನು ಉಡುಗೊರೆಯಾಗಿ ನೀಡಿದಳು.

ಯುವ ರಾಜಕುಮಾರಿಯನ್ನು ಮೇಜರ್ ಮತ್ತು ಶ್ರೀಮತಿ ಡ್ರಮ್ಮಂಡ್ ಎಂಬ ಸೇನಾ ದಂಪತಿಗಳ ಆರೈಕೆಗೆ ಕೊಡಲಾಯಿತು. ಅರಮನೆಯು ರಾಜಕುಮಾರಿ ಗೌರಮ್ಮ ಮತ್ತು ಮಹಾರಾಜ ದುಲೀಪ್ ಸಿಂಗ್ ಅವರನ್ನು ಮದುವೆಯಾಗಲು ಪ್ರಯತ್ನಿಸಿತು. ಇಬ್ಬರೂ ಒಬ್ಬರಿಗೊಬ್ಬರು ಎಂದಿಗೂ ಆಕರ್ಷಿತರಾಗದಿದ್ದರೂ, ಬದಲಾಗಿ ಬಲವಾದ ಸೌಹಾರ್ದತೆ ಬೆಳೆಯಿತು ಮತ್ತು ಮಹಾರಾಜರು ಆಗಾಗ್ಗೆ ರಾಜಕುಮಾರಿಯನ್ನು ತನ್ನ ‘ಗೌರವದ ಸಹೋದರಿ’ ಎಂದು ಕರೆಯುತ್ತಿದ್ದರು. ಇಲ್ಲಿಂದ ರಾಜಮನೆತನದ ಬಗ್ಗೆ ರಾಜಕುಮಾರಿ ಗೌರಮ್ಮಗೆ ತನಗಿಂತ ಮೂವತ್ತು ವರ್ಷದ ಹಿರಿಯವನಾದ ಕರ್ನಲ್ ಜಾನ್ ಕ್ಯಾಂಪ್ಬೆಲ್ನೊಂದಿಗೆ ವಿವಾಹ ಮಾಡಿಕೊಡಲಾಯಿತು. ಅವರಿಗೆ ಎಡಿತ್ ವಿಕ್ಟೋರಿಯಾ ಗೌರಮ್ಮ ಕ್ಯಾಂಪ್ಬೆಲ್ ಎಂಬ ಮಗಳು ಜನಿಸಿದಳು.

ದುರದೃಷ್ಟವಶಾತ್ ಜಾನ್ ಕ್ಯಾಂಪ್ಬೆಲ್‌ ಬಹುದೊಡ್ಡ ಜೂಜುಕೋರನಾಗಿದ್ದು, ಗೌರಮ್ಮಳ ಆಸ್ತಿ ಮೇಲೆ ಕಣ್ಣಾಕಿದ್ದಲ್ಲದೆ  ಅವರ ದಾಂಪತ್ಯ ಜೀವನ ಸಹ ಸುಖಕರವಾಗಿರಲಿಲ್ಲ. ಗೌರಮ್ಮನಿಗೆ ರಾಜಮನೆತನದಿಂದ ಬರುತ್ತಿದ್ದ ರಾಜಭತ್ಯೆಯ ಮೇಲಷ್ಟೇ ಆತನ ಒಲವಿತ್ತು. ಕೊನೆಗೆ ರಾಜಕುಮಾರಿ ವಿಕ್ಟೋರಿಯಾ ಗೌರಮ್ಮ 1863 ರಲ್ಲಿ ಕ್ಷಯರೋಗಕ್ಕೆ ಬಲಿಯಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!