Sunday, December 10, 2023

Latest Posts

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಮೀಕ್ಷೆ ಪೂರ್ಣ: ಇಲ್ಲಿದೆ ಎರಡೂವರೆ ಲಕ್ಷಕ್ಕೂ ಹೆಚ್ಚು ಸ್ಟ್ರೀಟ್​ ಡಾಗ್ಸ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಬಿಎಂಪಿ ಪ್ರಸಕ್ತ ವರ್ಷದ ಬೀದಿ ನಾಯಿಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.

ಬಿಬಿಎಂಪಿಯ ಹೆಲ್ತ್ ಸ್ಪೆಷಲ್ ಕಮಿಷನರ್ ತ್ರಿಲೋಕ್ ಚಂದ್ರ ವಲಯವಾರು ಬೀದಿ ನಾಯಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಒಟ್ಟು 2,79,335 ಬೀದಿ ನಾಯಿಗಳನ್ನು ಗುರುತಿಸಲಾಗಿದೆ.

ಇತ್ತೀಚೆಗೆ ಬೀದಿ ನಾಯಿಗಳ ದಾಳಿಗೆ ಬೆಂಗಳೂರು ಜನರು ಒಳಗಾಗಿದ್ದರು. ಈ ಹಿನ್ನೆಲೆ ಮೂರು ತಿಂಗಳ ಹಿಂದೆಯೇ ಬಿಬಿಎಂಪಿ ಸಮೀಕ್ಷೆ ನಡೆಸುವುದಾಗಿ ಹೇಳಿತ್ತು. 2019ರ ಸಮೀಕ್ಷೆ ಪ್ರಕಾರ, ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಪಾಲಿಕೆ ಪಶುಪಾಲನೆ ವಿಭಾಗವು 2019ರಲ್ಲಿ 3.10 ಲಕ್ಷ ಬೀದಿ ನಾಯಿಗಳನ್ನು ಗುರುತಿಸಿತ್ತು. ಸುಮಾರು 32 ಸಾವಿರ ಬೀದಿ ನಾಯಿಗಳ ಸಂತತಿ ಕಾಲ ಕ್ರಮೇಣವಾಗಿ ಕಡಿಮೆಯಾಗಿದೆ. 2.79 ಲಕ್ಷ ಬೀದಿ ನಾಯಿಗಳ ಪೈಕಿ ಶೇ 71.85ರಷ್ಟು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಬಿಬಿಎಂಪಿ ಬೀದಿ ನಾಯಿ ಸಮೀಕ್ಷೆಗಾಗಿ ವಿವಿಧ ತಂಡ ರಚಿಸಲಾಗಿತ್ತು ಎಂದು ಪಾಲಿಕೆಯ ಹೆಲ್ತ್ ಸ್ಪೆಷಲ್ ಕಮಿಷನರ್ ತ್ರಿಲೋಕ್‌ ಚಂದ್ರ ತಿಳಿಸಿದರು.

ಅದೇ ರೀತಿ ರೇಬೀಸ್ ರೋಗವನ್ನು ತಡೆಗಟ್ಟಲು ಸಮೀಕ್ಷೆ ನಡೆಸಲಾಗಿದೆ. ಬೀದಿನಾಯಿಗಳ ಪರಿಪಾಲನೆ ದೃಷ್ಟಿಯಿಂದಲೂ ಸಮೀಕ್ಷೆ ಮಾಡಲಾಗಿದೆ. ಪಾಲಿಕೆ‌ಯಿಂದ ಸತತವಾಗಿ ಸಂತಾನಹರಣ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೀದಿ ನಾಯಿಗಳ ಸಮೀಕ್ಷೆ ನಡೆದು ನಾಲ್ಕು ವರ್ಷ ಆಗಿತ್ತು. ವೈಜ್ಞಾನಿಕವಾಗಿ 50 ತಂಡಗಳ ಮೂಲಕ ನಾವು ಸಮೀಕ್ಷೆ ನಡೆಸಿ, ವರದಿ ಕೊಟ್ಟಿದ್ದೇವೆ. ಸಮೀಕ್ಷೆ ಸಿಬ್ಬಂದಿಗೆ ಬಿಬಿಎಂಪಿಯಿಂದ ನಾವು ತರಬೇತಿ ಕೊಟ್ಟಿದ್ದೆವು ಎಂದರು.

ಕೆರೆ ಹಾಗೂ ಖಾಲಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಡ್ರೋನ್ ಬಳಸಲಾಗಿದೆ. ಈ ರೀತಿಯ ಬೀದಿ ನಾಯಿಗಳ ಸಮೀಕ್ಷೆಗಾಗಿ ಟೆಕ್ನಾಲಜಿ ಬಳಸುವಲ್ಲಿ ಯಶಸ್ವಿಯಾಗಿದ್ದೇವೆ. ಬೀದಿನಾಯಿಗಳ‌ ಮೇಲೆ ನಿಗಾ ಇಡಲು ನಾಯಿಗಳಿಗೆ ಜಿಯೋ ಟ್ಯಾಗಿಂಗ್ ಮಾಡಲಾಗುತ್ತದೆ. ಮೈಕ್ರೋ ಚಿಪ್ ಅಳವಡಿಕೆ ಮಾಡುವ ಮೂಲಕ ಬೀದಿನಾಯಿಗಳ ಮೇಲೆ ನಿಗಾ ಇಡಬಹುದು ಎಂದು ತಿಳಿಸಿದರು.

ಪ್ರಸಕ್ತ ವರ್ಷದ ಬೀದಿ ನಾಯಿಗಳ ಸಮೀಕ್ಷೆ ಪೂರ್ಣಗೊಂಡಿದ್ದು ಯಾವ ಯಾವ ವಲಯದಲ್ಲಿ ಎಷ್ಟು ಬೀದಿ ನಾಯಿಗಳಿವೆ ಅನ್ನೋ ಅಂಕಿ-ಅಂಶ ಇಲ್ಲಿದೆ.

ಪೂರ್ವ ವಲಯ – 37,685
ಪಶ್ಚಿಮ ವಲಯ – 22,025
ದಕ್ಷಿಣ ವಲಯ – 23,241
ದಸರಹಳ್ಳಿ ವಲಯ – 21,221
ಆರ್. ಆರ್ ನಗರ – 41,266
ಬೊಮ್ಮನಹಳ್ಳಿ – 39,183
ಯಲಹಂಕ ವಲಯ – 36,343
ಮಹದೇವಪುರ – 58,371
ಒಟ್ಟು – 2,79,335

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!