CINE | ಆಸ್ಕರ್‌ಗೋಸ್ಕರ ʼಲಾಪತಾ ಲೇಡೀಸ್‌ʼ ಸಿನಿಮಾ ಹೆಸರು ಬದಲಾಯಿಸಿದ ಟೀಂ!

ಹೊಸದಗಂತ ಡಿಜಿಟಲ್‌ ಡೆಸ್ಕ್‌: 

ಆಮಿರ್ ಖಾನ್ ನಿರ್ಮಾಣದ ಹಾಗೂ ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ಒಟಿಟಿಗೆ ಬಂದ ಬಳಿಕ ಜನರು ಹೆಚ್ಚು ಮೆಚ್ಚಿಕೊಂಡರು.

ಈ ಸಿನಿಮಾ ‘ಆಸ್ಕರ್ 2025’ ರೇಸ್​ನಲ್ಲಿ ಇದೆ. ಈ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಈಗ ಆಸ್ಕರ್ ರೇಸ್​ನಲ್ಲಿ ಇರುವ ಕಾರಣಕ್ಕೆ ಸಿನಿಮಾದ ಟೈಟಲ್ ಬದಲಿಸಲು ತಂಡ ಮುಂದಾಗಿದೆ. ಆಸ್ಕರ್ ಮಟ್ಟದಲ್ಲಿ ಸಿನಿಮಾ ಕ್ಯಾಂಪೇನ್ ಮಾಡಲು ಈ ಚಿತ್ರಕ್ಕೆ ‘ಲೋಸ್ಟ್​ ಲೇಡಿಸ್’ ( lost ladies) ಎಂದು ಹೆಸರನ್ನು ಇಡಲಾಗಿದೆ.

ಆಮಿರ್ ಖಾನ್ ಅವರ ನಿರ್ಮಾಣ ಸಂಸ್ಥೆಯಿಂದ ಈ ಬಗ್ಗೆ ಘೋಷಣೆ ಆಗಿದೆ. ‘ಲೋಸ್ಟ್​ ಲೇಡಿಸ್’ ಎಂದು ಟೈಟಲ್ ಬದಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ‘ಕಾಯುವಿಕೆ ಪೂರ್ಣಗೊಂಡಿದೆ. ಲೋಸ್ಟ್​ ಲೇಡಿಸ್ ಚಿತ್ರದ ಅಧಿಕೃತ ಪೋಸ್ಟರ್. ಫೂಲ್ ಹಾಗೂ ಜಯಾಳ ಪ್ರಯಾಣದ ಬಗ್ಗೆ ಈ ಸಿನಿಮಾ ಹೇಳುತ್ತದೆ’ ಎಂದು ಆಮಿರ್ ಖಾನ್ ಪ್ರೊಡಕ್ಷನ್ಸ್ ಕಡೆಯಿಂದ ಘೋಷಣೆ ಆಗಿದೆ.

 

View this post on Instagram

 

A post shared by Lost Ladies (@lostladiesfilm)

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!