ಹಂಪಿಯ ಪಟ್ಟಣದ ಯಲ್ಲಮ್ಮ ದೇವಸ್ಥಾನದ ಕಳಸ ಕಳವು

ಹೊಸದಿಗಂತ ವರದಿ, ವಿಜಯನಗರ:

ವಿಶ್ವವಿಖ್ಯಾತ ಹಂಪಿಯ ಪಟ್ಟಣದ ಯಲ್ಲಮ್ಮ ದೇವಿ ಸನ್ನಿಧಾನದ ಪಂಚಲೋಹದ ಕಳಸ ಕಳ್ಳತನವಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ವಿಜಯನಗರ ಕಾಲದ ಮಹತ್ವದ ದೇವಸ್ಥಾನಗಳಲ್ಲಿ ಇದೂ ಒಂದಾಗಿದ್ದು, ಮಹಾರಾಜರು ಬೇರೆ ಸಾಮ್ರಾಜ್ಯಗಳ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಈ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಂಕಣ ತೊಡುತ್ತಿದ್ದರು. ಆನಂತರ ಯುದ್ಧಕ್ಕೆ ತೆರಳುತ್ತಿದ್ದರು ಎಂಬುದು ಇತಿಹಾಸ.

ಅಲ್ಲದೇ, ಎಎಸ್‌ಐ ಅಧೀನದಲ್ಲಿರುವ ಇಲ್ಲಿನ ಕಮಲ ಮಂಟಪದಲ್ಲಿ ಎರಡು ತಿಂಗಳ ಹಿಂದೆಯಷ್ಟೇ ಶ್ರೀಗಂಧ ಮರ ಕಳ್ಳತನವಾಗಿತ್ತು. ಇದೀಗ ದೇವಸ್ಥಾನದ ಕಳ್ಳರುವುದು ಸ್ಥಳೀಯ ಭದ್ರತಾ ಮಹತ್ವದ ದೇವಾಲಯದ ಕಳಸ ಕಳ್ಳತನವಾಗಿರುವುದು ಹಂಪಿಯಲ್ಲಿನ ಭದ್ರತಾ ಲೋಪವನ್ನು ಎತ್ತಿ ತೋರುತ್ತಿದೆ.

ಈ ಕುರಿತು ಮಾಹಿತಿ ತಿಳಿದ ಹಂಪಿ ಪ್ರವಾಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!