‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಟ್ರೈಲರ್ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್ ವುಡ್ ನ ಹಿಟ್ ನಟ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ.

ಸಾಗರದಷ್ಟು ಪ್ರೇಮವನ್ನು ಎದೆಯೊಳಗೆ ಇಟ್ಟುಕೊಂಡ ಜೋಡಿಯ ಬಗ್ಗೆ, ನಿರ್ದೇಶಕ ಹೇಮಂತ್ ರಾವ್ (Hemanth Rao) ತೆರೆ ಮೇಲೆ ತಂದಿದ್ದಾರೆ..

ಟ್ರೈಲರ್​ನಲ್ಲಿ (Trailer) ಪ್ರೇಮದ ನವಿರತೆ, ತೀವ್ರತೆ, ವಿಧಿಯ ಕ್ರೂರತನ, ನಾಯಕ-ನಾಯಕಿಯ ಪ್ರೇಮವನ್ನು ಪರೀಕ್ಷಿಸುವ ಕೆಟ್ಟ ಸಮಯ ಎಲ್ಲದರ ಇಣುಕು ನೋಟವಿದೆ.

ದಿಗಂತದೆಡೆಗೆ ಮುಖ ಮಾಡಿ ಕಣ್ಮುಚ್ಚಿ ತಾನು ನೋಡಿದ ಸುಂದರ ದೃಶ್ಯ, ಸಂಗೀತವನ್ನು ಮತ್ತೆ ಮೆಲುಕು ಹಾಕಲು ಪ್ರಯತ್ನಿಸುವಷ್ಟು ಗಾಢ ಭಾವದಲೆಗಳನ್ನು ಎಬ್ಬಿಸುವಂತಿದೆ ಟ್ರೈಲರ್.

ಚರಣ್ ರಾಜ್​ರ ಹಿತವಾದ ಸಂಗೀತ, ಸುಂದರ ದೃಶ್ಯಗಳನ್ನು ನೋಡುಗನ ಎದೆಗೆ ಇಳಿಯುವಂತೆ ಮಾಡುವಲ್ಲಿ ಮಹತ್ವದ ಕಾರ್ಯ ಮಾಡಿದೆ.

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 1ಕ್ಕೆ ಬಿಡುಗಡೆ ಆಗುತ್ತಿದೆ. ಒಂದು ತಿಂಗಳ ಅಂತರದಲ್ಲಿ ಸಿನಿಮಾದ ಎರಡನೇ ಭಾಗವೂ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜೊತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!