ಕಲಾಪದಲ್ಲಿ ಮತ್ತೆ ವರ್ಗಾವಣೆ ದಂಧೆ ಪ್ರತಿಧ್ವನಿ: ಲಿಸ್ಟ್ ಕೊಡುತ್ತೇನೆ ಎಂದ ಕುಮಾರಸ್ವಾಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಧಾನಸಭೆಯಲ್ಲಿ ಕಲಾಪದ ಸಮಯ ವರ್ಗಾವಣೆ ದಂಧೆ ವಿಚಾರ ಮತ್ತೆ ಪ್ರತಿಧ್ವನಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಸ್ಪೀಕರ್ ಗೆ ವರ್ಗಾವಣೆ ದಂಧೆ ಲಿಸ್ಟ್ ಕಳುಹಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅದು ಹಿಂದಿನ ಸರ್ಕಾರದ ಲಿಸ್ಟ್ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಯತ್ನಾಳ್, ನಮಗೂ ಆ ಲಿಸ್ಟ್ ಕೊಡಿ. ಬೆಂಗಳೂರಿನಲ್ಲಿ ಸ್ಟಾಕ್ ಎಕ್ಸ್ ಚೇಂಜ್ ರೇಟ್ ಎಷ್ಟಿದೆ ನೋಡಬೇಕು ಎಂದಿದ್ದಾರೆ. ಈ ವೇಳೆ ಸ್ಪೀಕರ್ ಖಾದರ್ ಆಯ್ತು ಕಳುಹಿಸಿ ಕೊಡುತ್ತೇನೆ ಎಂದಿದ್ದಾರೆ.

ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ. ಎಲ್ಲದಕ್ಕೂ ದಾಖಲೆಗಳು ಇವೆ. ಇಲಾಖಾವಾರು ವರ್ಗಾವಣೆಗೆ ಹಣ ನಿಗದಿ ಬಗ್ಗೆ ವರದಿ ಪತ್ರವಿದೆ. ಎಲ್ಲವನ್ನೂ ಇಗಲಾದರೂ ಸರಿಪಡಿಸಿಕೊಳ್ಳಿ ಎಂದಷ್ಟೇ ಹೇಳುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!