ಕೇವಲ ಒಂದು ಗಂಟೆಯಲ್ಲಿ ಬಜೆಟ್ ಓದಿ ಮುಗಿಸಿದ ಕೇಂದ್ರ ವಿತ್ತ ಸಚಿವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ 2024-25ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದರು. ಇದಕ್ಕಾಗಿ ಅವರು ಕೇವಲ 1 ಗಂಟೆ ಮಾತ್ರ ತಗೆದುಕೊಂಡರು ಮತ್ತು ಇದು ಅತ್ಯಂತ ಚಿಕ್ಕ ಬಜೆಟ್ ಮಂಡನೆ ಎಂದರೆ ತಪ್ಪಾಗಲಾರದು.

2023 ರಲ್ಲಿ ಕೇವಲ 87 ನಿಮಿಷಗಳ ಕಾಲ ಬಜೆಟ್ ಮಂಡನೆ ನಡೆಯಿತು. 2020 ರಲ್ಲಿ, ಬರೋಬ್ಬರಿ 2 ಗಂಟೆ 45 ನಿಮಿಷಗಳ ದೀರ್ಘಾವಧಿಯ ಬಜೆಟ್ ಅನ್ನು ಮಂಡಿಸಿದರು. ಅವರು ತಮ್ಮ ಘೋಷಣೆಗಳ ನಡುವೆ ವಿರಮಿಸಿದರು, ನೀರು ಕುಡಿದರು ಮತ್ತು ನಂತರ ಬಜೆಟ್ ಓದುವುದನ್ನು ಮುಂದುವರೆಸಿದರು.

ಇಡೀ ಬಜೆಟ್ ಅಭಿವೃದ್ಧಿ ಇತಿಹಾಸದಲ್ಲಿ ಯಾರೂ ಇಷ್ಟು ಸುದೀರ್ಘ ಭಾಷಣ ಮಾಡಿಲ್ಲ ಎಂದರು. ಈಗ ಕೇವಲ 1 ಗಂಟೆಯಲ್ಲಿ ಬಜೆಟ್ ಮಂಡಿಸಿರುವುದು ಅಚ್ಚರಿ ಮೂಡಿಸಿದೆ. ಅವರು 2022 ರಲ್ಲಿ 92 ನಿಮಿಷಗಳ ಬಜೆಟ್ ಅನ್ನು ಮಂಡಿಸಿದ್ದರು.

1977 ರಲ್ಲಿ, ಹಿರೋಭಾಯಿ ಎಂ. ಪಟೇಲ್ ಅವರು ಕೇವಲ 800 ಪದಗಳ ಭಾಷಣವನ್ನು ಬಹುಶಃ ಅರ್ಧ ಗಂಟೆಗಿಂತ ಕಡಿಮೆ ಅವಧಿಯಲ್ಲಿ ಮಾಡಿದ್ದರು. 2021 ರಲ್ಲಿ ಅವರು ಒಂದು ಗಂಟೆ 50 ನಿಮಿಷಗಳ ಬಜೆಟ್ ಮಂಡಿಸಿದ್ದರು. ಅವರು 2019 ರಲ್ಲಿ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದರು. ಆ ವರ್ಷ ಅವರು 2 ಗಂಟೆ 17 ನಿಮಿಷಗಳ ಅವಧಿಯ ಬಜೆಟ್ ಅನ್ನು ಮಂಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!