ಟೂರ್ನಿ ಅರ್ಧದಲ್ಲಿ ಸೇರಿಕೊಂಡಿದ್ದ ಅನ್‌ಸೋಲ್ಡ್‌ ಪ್ಲೇಯರ್‌ ಟ್ರೋಫಿ ಗೆಲ್ಲಿಸಿಕೊಟ್ರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆಕ್ಷನ್‌ನಲ್ಲಿ ಯಾರೂ ತೆಗೆದುಕೊಳ್ಳದ ಪ್ಲೇಯರ್‌ ಒಬ್ಬರು ತಂಡವನ್ನೇ ಮುನ್ನಡೆಸಿ ಚಾಂಪಿಯನ್‌ ಮಾಡಿಸಿಬಿಟ್ರು! ಹೌದು, ಆರ್‌ಸಿಬಿ ಕ್ಯಾಪ್ಟನ್‌ ರಜತ್‌ ಪಾಟೀದಾರ್‌ ಫೀಲ್ಡ್‌ನಲ್ಲಿ ಮ್ಯಾಜಿಕ್‌ ಮಾಡಿದ್ದಾರೆ. ರೋಲರ್‌ ಕೋಸ್ಟರ್‌ನಂಥ ಕ್ರಿಕೆಟ್‌ ಜರ್ನಿ ಹೊಂದಿರುವ ಪಾಟೀದಾರ್‌ ನಮಗೆ ಟ್ರೋಫಿಯನ್ನೇ ತಂದುಕೊಟ್ಟಿದ್ದಾರೆ!

2021 ರಲ್ಲಿ ಆರ್‌ಸಿಬಿ ತಂಡವನ್ನು ಸೇರಿದ್ದ ರಜತ್‌ ಕೇವಲ 4 ಪಂದ್ಯದಲ್ಲಿ 71 ರನ್‌ ಹೊಡೆದಿದ್ದರು. ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಆರ್‌ಸಿಬಿ ಅವರನ್ನು ಕೈಬಿಟ್ಟಿತ್ತು. 2022ರ ಹರಾಜಿನಲ್ಲಿ ಯಾವುದೇ ತಂಡ ರಜತ್‌ ಅವರನ್ನು ಖರೀದಿಸದ ಕಾರಣ ಅಲ್‌ಸೋಲ್ಡ್‌ ಆಗಿದ್ದರು.

2022ರ ಆವೃತ್ತಿಯಲ್ಲಿ ಕರ್ನಾಟಕದ ಲುವ್ನಿತ್ ಸಿಸೋಡಿಯಾ ಗಂಭೀರವಾಗಿ ಗಾಯಗೊಳ್ಳುತ್ತಾರೆ. ಇವರ ಜಾಗಕ್ಕೆ ಯಾರನ್ನು ಖರೀದಿಸಬೇಕು ಎಂದು ಯೋಚನೆಯಲ್ಲಿದ್ದಾಗ ಆರ್‌ಸಿಬಿಗೆ ಹೊಳೆದದ್ದೇ ರಜತ್‌ ಪಾಟಿದಾರ್‌ ಹೆಸರು. ಹೀಗಾಗಿ ಟೂರ್ನಿಯ ಅರ್ಧದಲ್ಲಿ ರಜತ್‌ ಮತ್ತೆ ಆರ್‌ಸಿಬಿ ತಂಡವನ್ನು ಸೇರುತ್ತಾರೆ.

20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಆರ್‌ಸಿಬಿಗೆ ಮರಳಿ ಬಂದ ನಂತರ ರಜತ್‌ ಸ್ಫೋಟಕ ಆಟವನ್ನು ಪ್ರದರ್ಶಿಸುತ್ತಾರೆ. ಅದರಲ್ಲೂ ಎಲಿಮಿನೇಟರ್‌ ಪಂದ್ಯದಲ್ಲಿ ರಜತ್‌ ಲಕ್ನೋ ವಿರುದ್ಧ ಕೇವಲ 54 ಎಸೆತಗಳಲ್ಲಿ 112 ರನ್‌ ( 12 ಬೌಂಡರಿ,7 ಸಿಕ್ಸ್‌) ಹೊಡೆದು ದಾಖಲೆ ನಿರ್ಮಿಸಿದ್ದರು. ಈ ಪಂದ್ಯವನ್ನು ಆರ್‌ಸಿಬಿ ರೋಚಕ 14 ರನ್‌ಗಳಿಂದ ಗೆದ್ದುಕೊಳ್ಳುತ್ತದೆ. ಈ ಮೂಲಕ ಭಾರತ ತಂಡ ಸೇರದೇ ಶತಕ ಹೊಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಜತ್‌ ಪಾತ್ರವಾಗುತ್ತಾರೆ.

2024 ರಲ್ಲಿ ಆರ್‌ಸಿಬಿ ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಯಶ್‌ ದಯಾಳ್‌ ಅವರನ್ನು ಉಳಿಸಿಕೊಂಡಿತ್ತು. ನಾಯಕನಾಗಿದ್ದ ಡುಪ್ಲೆಸಿಸ್‌ ಅವರನ್ನು ಕೈ ಬಿಟ್ಟು ರಜತ್‌ ಪಾಟಿದರ್‌ ಅವರನ್ನು 11 ಕೋಟಿ ರೂ. ನೀಡಿ ಉಳಿಸಿಕೊಂಡಾಗ ಈ ಬಾರಿ ಆರ್‌ಸಿಬಿ ನಾಯಕನಾಗುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಆದರೆ ವಿರಾಟ್‌ ಕೊಹ್ಲಿ ಅವರನ್ನು ಉಳಿಸಿಕೊಂಡಿರುವಾಗ ಯಾರು ನಾಯಕನಾಗಬಹುದು ಎಂಬ ಕುತೂಹಲ ಮೂಡಿತ್ತು. ಕೊನೆಗೆ ಆರ್‌ಸಿಬಿ ತಂಡ ರಜತ್‌ಗೆ ಕ್ಯಾಪ್ಟನ್‌ ಪಟ್ಟ ನೀಡಿತ್ತು.

ನಾಯಕ ಸ್ಥಾನಕ್ಕೆ ನ್ಯಾಯ ನೀಡಿದ ಪಾಟಿದಾರ್‌ ಈ ಬಾರಿಯ 15 ಪಂದ್ಯಗಳಿಂದ 312 ರನ್‌ ಹೊಡೆದಿದ್ದಾರೆ. 143.78 ಸ್ಟ್ರೈಕ್‌ ರೇಟ್‌ನಲ್ಲಿ2 ಬಾರಿ ಅರ್ಧಶತಕ ಹೊಡೆದಿದ್ದಾರೆ. ರಜತ್‌ ಪಾಟಿದಾರ್‌ ಒಟ್ಟು 42 ಐಪಿಎಲ್‌ ಪಂದ್ಯ ಆಡಿದ್ದು ಒಟ್ಟು 1111 ರನ್‌ ಹೊಡೆದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!