Friday, December 8, 2023

Latest Posts

‘ದಿ ವ್ಯಾಕ್ಸಿನ್ ವಾರ್’ ಸತ್ಯ ಘಟನೆ ಆಧಾರಿತ ಸಿನಿಮಾ: ವಿವೇಕ್ ಅಗ್ನಿಹೋತ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿ ಕಾಶ್ಮೀರ್ ಫೈಲ್ಸ್ (The Kashmir Files) ಖ್ಯಾತಿಯ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಮುಂದಿನ ಸಿನಿಮಾ ದಿ ವ್ಯಾಕ್ಸಿನ್ ವಾರ್ ಸದ್ಯದಲ್ಲೇ ಬಿಡುಗಡೆ ಆಗುತ್ತಿದೆ.

ದಿ ಕಾಶ್ಮೀರ್ ಫೈಲ್ಸ್ ನಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾಗಿ ಕಥೆ ಹೇಳಿದ್ದ ನಿರ್ದೇಶಕರು ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಕ್ಯೂರಿಯಾಟಿಸಿ ಎಲ್ಲರಲ್ಲಿ ಕಾಡಿದೆ.

ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ಕೋವಿಡ್‍ ದಿನಗಳ ಕಥೆ ಸಿನಿಮಾದಲ್ಲಿದೆ ಎಂದು ಹೇಳಲಾಗುತ್ತಿದ್ದು, ವ್ಯಾಕ್ಸಿನ್ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೇ, ನೂರಕ್ಕೂ ನೂರರಷ್ಟು ಸತ್ಯ ಘಟನೆಗಳನ್ನೇ ಆಧರಿಸಿ ತಯಾರಾದ ಚಿತ್ರವೆಂದಿದ್ದಾರ.

ಮೊನ್ನೆಯಷ್ಟೇ ತಮ್ಮ ಹೊಸ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’ (The Vaccine War) ಅನ್ನು ಕನ್ನಡದ ಸಿಲೆಬ್ರಿಟಿಗಳಿಗೆ ಪ್ರದರ್ಶನ ಏರ್ಪಡಿಸಿದ್ದರು ವಿವೇಕ್ ಅಗ್ನಿಹೋತ್ರಿ. ಈ ಸಂದರ್ಭದಲ್ಲಿ ಸಹಜವಾಗಿಯೇ ಅವರಿಗೊಂದು ಪ್ರಶ್ನೆ ತೂರಿ ಬಂತು. ನೀವು ವಿವಾದಕ್ಕಾಗಿ (Controversy) ಸಿನಿಮಾ ಮಾಡುತ್ತೀರಿ ಎಂದು ಪ್ರಶ್ನೆ ಮುಂದಿಡಲಾಗಿತ್ತು.

ಈ ಪ್ರಶ್ನೆಗೆ ಉತ್ತರಿಸಿದ ವಿವೇಕ್ ಅಗ್ನಿಹೋತ್ರಿ. ‘ನಾನು ವಿವಾದಕ್ಕಾಗಿ ಸಿನಿಮಾ ಮಾಡುವುದಿಲ್ಲ. ಹಾಗೆ ಮಾಡುವುದೇ ಆಗಿದ್ದರೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಪಾರ್ಟ್ 2 ಮಾಡುತ್ತಿದ್ದೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವೆ. ಅದನ್ನು ವಿವಾದ ಮಾಡಲಾಗುತ್ತಿದೆ. ನನ್ನ ಉದ್ದೇಶ ನಿಜ ಸಂಗತಿಯನ್ನು ಹೇಳುವುದು ಅಷ್ಟೇ ಆಗಿದೆ’ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!