ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ಎಸಗಿ ರಸ್ತೆಯುದ್ದಕ್ಕೂ ಬೆತ್ತಲೆ ಮೆರವಣಿಗೆ ಮಾಡಿದ್ದ ಆರೋಪಿಗಳ ಪೈಕಿ, ಪ್ರಮುಖ ಆರೋಪಿ ಮನೆಗೆ ಗ್ರಾಮಸ್ಥರು ಬೆಂಕಿ ಇಟ್ಟಿದ್ದಾರೆ.
ಆರೋಪಿ ಹುಯಿರೆಮ್ ಹೆರದಾಸ್ ನಿವಾಸಕ್ಕೆ ಬೆಂಕಿ ಇಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕೂಡ ವೈರಲ್ ಆಗಿದೆ. ಸಾವಿರಕ್ಕೂ ಹೆಚ್ಚು ಮಂದಿ ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸಿದ್ದು, ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಇಡೀ ದೇಶವೇ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿತ್ತು. ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ ಎಂದು ದೇಶವೇ ಮನವಿ ಮಾಡಿದೆ.