ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಸೀಸನ್ 10 ರ ಅಂತಿಮ ಪಂಚಾಯತಿ ಬಹಳ ಕುತೂಹಲದಿಂದ ನಡೆದಿದೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಎಲ್ಲಾ ಸ್ಪರ್ಧಿಗಳಿಗೂ ಸ್ವಲ್ಪ ಹೋಂವರ್ಕ್ ಕೊಟ್ಟಿದ್ದಾರೆ. ಅದೇನೆಂದರೆ ಸ್ಟೋರ್ ರೂಮ್ನಲ್ಲಿ ತಂದಿರಿಸಿದ್ದ ಒಂದಷ್ಟು ವಸ್ತುಗಳು ಅಥವಾ ಚಿತ್ರಗಳು ಮನೆಯಲ್ಲಿ ಯಾವ ಸದಸ್ಯರಿಗೆ ಹೋಲಿಕೆ ಆಗುತ್ತೆ ಅನ್ನೋದನ್ನ ನೇರವಾಗಿ ಸ್ಪರ್ಧಿಗಳ ಮುಂದೆ ಹೇಳಬೇಕಿತ್ತು.
ಪ್ರತಾಪನ ಸರದಿ ಬಂದಾಗ ಕೈಯಲ್ಲಿದ್ದ ಗಮ್ ಚಿತ್ರವನ್ನು ಕಾರ್ತಿಕನಿಗೆ ಹೋಲಿಸಿದರು. ಇದಲ್ಲದೆ, ಕಾರ್ತಿಕ್ ಸಂಗೀತಾ ಮತ್ತು ನಮ್ರತಾ ಹಿಂದೆ ಇದ್ದಾರೆ. ಯಾವಾಗಲೂ ಅವರೊಂದಿಗೆ ಅಂಟಿಕೊಂಡಿದ್ದೀರಾ ಎಂದು ಹೇಳುತ್ತಾನೆ. ಬಳಿಕ ಆ ಫೋಟೋವನ್ನ ಕಾರ್ತಿಕ್ ಅವ್ರಿಗೆ ಕೊಡುತ್ತಾರೆ.
ಅದಕ್ಕೆ ಕಾರ್ತಿಕ್ ಕೋಪ ಮಾಡಿಕೊಂದು ಇರೋದನ್ನ ಮಾತಾಡಬೇಡ. ನಿಲ್ಲಿಸಿ ಸರಿಯಾಗಿ ವಿವರಿಸಿ ಎಂದರು. ಈ ವೇಳೆ ಅವರ ನಡುವಿನ ಮಾತಿನ ಸಮರಕ್ಕೆ ಸಂಗೀತಾ ಮಧ್ಯ ಪ್ರವೇಶಿಸಿದ್ದಾರೆ. ಅವ್ನಿಗೆ ಇಲ್ಲಿ ನಿಲ್ಲುವಂತೆ ಆದೇಶಿಸಲು ನಿನಗೆ ಅಧಿಕಾರವಿಲ್ಲ ಎಂದು ಸಂಗೀತಾ ಕಾರ್ತಿಕ್‌ಗೆ ಹೇಳುತ್ತಾರೆ. ಇದಕ್ಕೆ ಸುಮ್ಮನಾಗದ ಕಾರ್ತಿಕ್ ಸಂಗೀತಾ ಬಳಿ ನೀನು ಮಾತನಾಡಬೇಡ. ನೀನು ಅವನ ಚೇಳನಾ? ಎಂದಿದ್ದಾರೆ. ನೀನು ಮಾಡುತ್ತಿರೋದು ಅದೇ ಕೆಲಸ ಎಂದಿದ್ದಾರೆ.
ಅತ್ತ ಸಂಗೀತಾ ನನ್ನನ್ನ ಚೇಳಾ ಅಂತ ಕರೆಯಬೇಡ ಎಂದು ಹೇಳಿದ್ದಲ್ಲದೆ, ಕಾರ್ತಿಕ್‌ಗೆ ನಾನ್ಸೆನ್ಸ್ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್ ಭಾರೀ ಕುತೂಹಲ ಕೆರಳಿಸಿದ್ದು, ಮೂವರ ಮಾತಿನ ಯುದ್ಧವನ್ನು ಬಿಗ್ ಬಾಸ್ ಫ್ಯಾನ್ಸ್ ಕಾಣಲು ಕಾತುರರಾಗಿದ್ದಾರೆ.