ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕಾಣಲು ಭಕ್ತಾದಿಗಳಿಗೆ ಇನ್ನಷ್ಟು ಸುಲಭವಾಯಿತು ಹಾದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪವಿತ್ರಾ ಯಾತ್ರಾ ಸ್ಥಳ ಶಬರಿಮಲೆಗೆ ತೆರಳುವ ಭಕ್ತಾದಿಗಳಿಗೆ ಖುಷಿಕೊಡುವ ಸುದ್ದಿಯಿದು!
ಶ್ರೀ ಅಯ್ಯಪ್ಪ ಸ್ವಾಮಿಯ ದರುಶನಕ್ಕಾಗಿ ಸಾಂಪ್ರದಾಯಿಕ ಮಾದರಿಯಲ್ಲಿಯೇ ಕಾಲ್ನಡಿಗೆ ಮೂಲಕ ತೆರಳುತ್ತೇವೆ ಎನ್ನುವ ಭಕ್ತರು ಇನ್ನು ಕಲ್ಲು, ಮುಳ್ಳು ತುಳಿಯಬೇಕಿಲ್ಲ. ಸುಲಭವಾಗಿ ಮಲೆ ಏರಬಹುದು.

ಈ ದಾರಿಯುದ್ದಕ್ಕೂ ಈಗ ಕಲ್ಲು ಹಾಸು ಹಾಕಲಾಗಿದೆ. ಕೇಂದ್ರ ಸರ್ಕಾರದ ಯಾತ್ರಿ ಪ್ರವಾಸೋದ್ಯಮ ಯೋಜನೆಯಡಿ ಈ ಕಾಮಗಾರಿ ನಡೆಸಲಾಗಿದ್ದು, 12 ಕೋಟಿ ರೂ.ಗಳ ಯೋಜನಾ ಮೊತ್ತವನ್ನು ಇದಕ್ಕೆ ಬಳಸಲಾಗಿದೆ.

ಇನ್ನೂ ವಿಶೇಷವೆಂದರೆ ಇಲ್ಲಿ ಹಾಸಲಾಗಿರುವ ಕಲ್ಲುಗಳನ್ನು ಕರ್ನಾಟಕದ ಸಾದರಹಳ್ಳಿ, ಹೊಸೂರಿನಿಂದ ತರಲಾಗಿದೆ. ಕಾಮಗಾರಿ ಕೊನೆಯ ಹಂತದಲ್ಲಿದ್ದು, ರಸ್ತೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ರಸ್ತೆಯನ್ನು ನವೆಂಬರ್ 17 ರಂದು ಕೇರಳ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಲೋಕಾರ್ಪಣೆಗೊಳಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!