ಏನೇ ಹೇಳಿ ವಾತಾವರಣ ನಿಜಕ್ಕೂ ಸರಿಯಿಲ್ಲ. ವರ್ಷದಿಂದ ವರ್ಷಕ್ಕೆ ಎಲ್ಲವೂ ಹಾಳಾಗ್ತಲೇ ಇದೆ. ಬೆಳಗ್ಗೆ ಚಳಿ, ಮಧ್ಯಾಹ್ನ ಸುಡು ಬಿಸಿಲು, ಸಂಜೆ ಮಳೆ ಹೀಗೆ ಎಲ್ಲ ವೆದರ್ ಒಂದೇ ದಿನದಲ್ಲಿ ಕಾಣಿಸ್ತಾ ಇದೆ. ಇದರಿಂದ ಮಕ್ಕಳಲ್ಲಿ ಅನಾರೋಗ್ಯ ಕಾಡುತ್ತಿದೆ. ಕಾಯಿಲೆ ಹರಡೋಕೆ ನೀರು ಕೂಡ ಮುಖ್ಯ ಕಾರಣ. ಹಾಗಾಗಿ ಮಕ್ಕಳಿಗೆ ಕೊಡೋ ನೀರನ್ನು ಕುದಿಸಿ ಆರಿಸಿ.. ಯಾಕೆ ನೋಡಿ..
ನೀರಿನಲ್ಲಿ ಇರೋ ಬ್ಯಾಕ್ಟೀರಿಯಾ ಅಥವಾ ಇಂಪ್ಯೂರಿಟಿಗಳು ಕುದಿಸಿದಾಗ ಹೋಗುತ್ತವೆ.
ವಾಂತಿ, ಬೇಧಿ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಬಿಸಿ ಕೊಲ್ಲುತ್ತದೆ.
ಒಂದು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಮಿಸ್ ಮಾಡದೆ ಕುದಿಸಿ ಆರಿಸಿದ ನೀರು ಕುಡಿಸಿ. ಅವರ ಇಮ್ಯೂನ್ ಸಿಸ್ಟಮ್‌ಗೆ ಇದು ಮುಖ್ಯ.
ನೀರಿನಲ್ಲಿ ಫ್ಲೋರೈಡ್ ಇರುತ್ತದೆ. ಕುದಿಸಿದಾಗ ಇದು ಹೋಗುವುದಿಲ್ಲ. ಹಾಗಾಗಿ ಮಕ್ಕಳ ಹಲ್ಲುಗಳ ಬೆಳವಣಿಗೆಗೆ ಫ್ಲೋರೈಡ್ ಸಹಾಯ ಮಾಡುತ್ತದೆ.
ಉಪಯೋಗಕ್ಕೆ ಬಾರದ ಕೆಮಿಕಲ್ಸ್‌ನ್ನು ಕೂಡ ಕುದಿಸುವುದರಿಂದ ತೆಗೆಯಬಹುದು. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸುತ್ತದೆ.