July 24, 2026
Friday, July 24, 2026
spot_img

‘ಎಲ್ಲರ ಒಳಿತೇ ಹಿಂದು ವಿಚಾರಧಾರೆ, ಅದೇ ಭಾರತದ ಆತ್ಮ’: ಕೃಷ್ಣಪ್ರಸಾದ್

ಹೊಸದಿಗಂತ ವರದಿ ಶಿವಮೊಗ್ಗ:

ಎಲ್ಲರಿಗೂ ಒಳ್ಳೆಯದಾಗಲಿ ಎಂಬುದೇ ಹಿಂದು ವಿಚಾರಧಾರೆ, ಭಾರತದ ಆತ್ಮವಿದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣಪ್ರಸಾದ್ ಹೇಳಿದರು.

ಸಾಗರ ನಗರದ ಕುಡುಪಲಿ ಸದಾನಂದ ಸ್ವರಾಲಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಹಿನ್ನೆಲೆ ನಡೆದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿದರು.

ದೇಶ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು, ಹಿಂದುತ್ವ ಉಳಿಯಬೇಕಾದರೆ ದೇಶ ಉಳಿಯಬೇಕೆಂಬ ವಿಚಾರದಿಂದ ಸಂಘದ ನಡೆದು ಬಂದಿದೆ. ಸಂಘದ ಶಾಖೆಗೆ ಬಂದವರಿಗೆ ನಾನೊಬ್ಬನಲ್ಲ ನಾವೆಲ್ಲರೂ ಅನಿಸುತ್ತದೆ. ಆ ಮೂಲಕ ಸಮಾಜ ಪರಿವರ್ತನೆ ಕಾರ್ಯ ಆಗುತ್ತಿದೆ ಎಂದರು.

ಇದನ್ನೂ ಓದಿ:

ಪರಕೀಯರ ದಾಸ್ಯಕ್ಕೆ ಒಳಗಾಗಗಲು ಕಾರಣವೇನೆಂದು ಚಿಂತಿಸಿದವರು ಡಾಕ್ಟರ್ ಜೀ. ಪರಸ್ಪರ ಕಿತ್ತಾಟದಿಂದ ಮೈಮರೆತು ಕೀಳರಿಮೆ ಬೆಳೆಯಿತು. ಆತ್ಮಹೀನಾಯತೆ, ಆತ್ಮವಿಸ್ಮತಿಯಿಂದ ದೇಶವನ್ನು ಆಚೆಗೆ ತರುವ ಬಗ್ಗೆ ಯೋಚಿಸಿ ಸಂಘವನ್ನು ಆರಂಭಿಸಿದರು ಎಂದರು.

ಭಾರತದ ರಾಷ್ಟ್ರೀಯತೆಯ ಸತ್ವ ಹಿಂದುತ್ವ. ಅನೇಕ ಮತಗಳಿವೆ, ಸಂಪ್ರದಾಯ, ಆಚರಣೆಗಳಿವೆ ಅವ್ಯಾವು ಕೆಟ್ಟದ್ದನ್ನೇಳಿಲ್ಲ ಅರ್ಥೈಸಿಕೊಂಡ ರೀತಿ ತಪ್ಪಾಗಿರಬಹುದು. ಭಾರತವನ್ನು ತಿಳಿಯಲು ಮಾತೃದೇವೋ ಭವ, ಪಿತೃದೇವೋ ಭವ, ರಾಷ್ಟ್ರದೇವೋ ಭವ ಎಂಬ ವಿಚಾರವನ್ನು ಜೀವನದಲ್ಲಿ ಜೋಡಿಸಿಕೊಳ್ಳಬೇಕು. ಬುದ್ಧ, ಬಸವ, ವಿವೇಕಾನಂದ ಬೋಧನೆಗಳನ್ನು ಅನುಸರಿಸುವುದು ರಾಷ್ಟ್ರೀಯತೆ ಎಂದ ತಿಳಿಸಿದರು.

ಈ ಸಂದರ್ಭದಲ್ಲಿ ಸಗರ ಜಿಲ್ಲಾ ಸಂಘಚಾಲಕ ಕೇಶವ ಸಂಪೆಕೈ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !