ಜನವರಿಯಲ್ಲಿ 4.73ಶೇಕಡಾಗೆ ಇಳಿದಿದೆ ಸಗಟು ಹಣದುಬ್ಬರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನವರಿ ತಿಂಗಳಿನ ಸಗಟು ಬೆಲೆ ಆಧಾರಿತ ಹಣದುಬ್ಬರವು 4.73ಕ್ಕೆ ಶೇಕಡಾಗೆ ಇಳಿಕೆಯಾಗಿದ್ದು ಉತ್ಪಾದನೆಯ ವಸ್ತುಗಳು, ಇಂಧನ ಮತ್ತು ಶಕ್ತಿಯ ಬೆಲೆಗಳನ್ನು ಸರಾಗಗೊಳಿಸಿದೆ. ಸಗಟು ಬೆಲೆ ಆಧರಿತ ಹಣದುಬ್ಬರವು ಕಳೆದ ಕೆಲವು ತಿಂಗಳುಗಳಿಂದ ಇಳಿಕೆಯಾಗುತ್ತಿದ್ದು ಸತತ ಎಂಟನೇ ತಿಂಗಳಿನ ಇಳಿಕೆಯಾಗಿದೆ.

ಸಗಟು ಬೆಲೆ-ಸೂಚ್ಯಂಕ (WPI) ಆಧಾರಿತ ಹಣದುಬ್ಬರ ದರವು ಡಿಸೆಂಬರ್ 2022 ರಲ್ಲಿ 4.95 ಶೇಕಡಾದಷ್ಟಿತ್ತು ಮತ್ತು ಜನವರಿ 2022 ರಲ್ಲಿ 13.68 ಶೇಕಡಾಗಳಷ್ಟಿತ್ತು.

ಆದಾಗ್ಯೂ, ಆಹಾರ ಪದಾರ್ಥಗಳ ಹಣದುಬ್ಬರವು ಜನವರಿಯಲ್ಲಿ 2.38 ಶೇಕಡಾಕ್ಕೆ ಏರಿದೆ, ಇದು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ (-) 1.25 ಶೇಕಡಾದಷ್ಟಿತ್ತು.

“ಜನವರಿ, 2023 ರಲ್ಲಿ ಹಣದುಬ್ಬರ ದರದಲ್ಲಿ ಕುಸಿತವು ಪ್ರಾಥಮಿಕವಾಗಿ ಖನಿಜ ತೈಲಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಜವಳಿ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಜವಳಿ ಮತ್ತು ಆಹಾರ ಉತ್ಪನ್ನಗಳ ಕೊಡುಗೆಯಾಗಿದೆ” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!