Monday, October 2, 2023

Latest Posts

10 ಸಾವಿರ ಅಡಿ ಎತ್ತರದಲ್ಲಿ ಜಿ20 ಧ್ವಜ ಹಿಡಿದು ಸ್ಕೈ ಡೈವ್ ಮಾಡಿದ ವಿಂಗ್ ಕಮಾಂಡರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಿ-20 ಶೃಂಗಸಭೆಗೆ ರಾಷ್ಟ್ರದ ರಾಜಧಾನಿ ಮಧುವಣಗಿತ್ತಿಯಂತೆ ಸಜ್ಜುಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಗಜೇಂದ್ರ ಯಾದವ್ ಅವರು 10 ಸಾವಿರ ಅಡಿ ಎತ್ತರದಲ್ಲಿ ಜಿ20 ಧ್ವಜ ಹಿಡಿದುಕೊಂಡು ಸ್ಕೈ ಡೈವ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ10 ಸಾವಿರ ಅಡಿ ಎತ್ತರದಲ್ಲಿ ಗಜಾನಂದ ಯಾದವ್ ಅವರು ಸ್ಕೈ ಡೈವ್ ಮಾಡುತ್ತಿರುವ ದೃಶ್ಯ ವೈರಲ್ ಆಗಿಸಿದೆ.

ವಿಂಗ್ ಕಮಾಂಡರ್ ಗಜಾನಂದ ಯಾದವ ಅವರು ‘ವಸುಧೈವ ಕುಟುಂಬಕಂ – ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಸಂಭ್ರಮ’ ಎಂಬ ವಿಚಾರವನ್ನು ಪ್ರತಿಧ್ವನಿಸುವ ಥೀಮ್‌ನಿಂದ ಅಲಂಕರಿಸಲ್ಪಟ್ಟ G20 2023ರ ಧ್ವಜವನ್ನು ಹಿಡಿದು 10,000 ಅಡಿಗಳ ಎತ್ತರದಲ್ಲಿ ಹಾರುತ್ತಿರುವವ ದೃಶ್ಯ ನಯನ ಮನೋಹರವಾಗಿದೆ.

https://twitter.com/SWAC_IAF/status/1633127147475996673/photo/1

ಏರ್ ಫೋರ್ಸ್ ಸ್ಟೇಷನ್ ಮಾಧ್ ಐಲ್ಯಾಂಡ್‌ನಲ್ಲಿ (Madh Island) ಕರ್ತವ್ಯದಲ್ಲಿರುವ ವಿಂಗ್ ಕಮಾಂಡರ್ ಯಾದವ ಅವರು ಜೋಧ್‌ಪುರದ (Jodhpur) ಫಲೋಡಿಯಲ್ಲಿರುವ ವಾಯುಪಡೆಯ ನಿಲ್ದಾಣದಿಂದ ಈ ಸಾಹಸ ಪ್ರದರ್ಶನ ಮಾಡಿದ್ದಾರೆ. ಇದು ಮಾರ್ಚ್‌ ತಿಂಗಳಲ್ಲಿ ಮಾಡಿದ ಸಾಹಸವಾಗಿದ್ದು, ಈಗ ಜಿ-20 ಸಮಾವೇಶದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

G20 ಶೃಂಗಸಭೆಯು ಜಾಗತಿಕ ಪ್ರಾಮುಖ್ಯತೆಯ ಸಭೆಯಾಗಲಿದ್ದು, 40 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರಿ ಗಣ್ಯರು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ನವದೆಹಲಿಯಲ್ಲಿ ಸಮಾವೇಶಗೊಳ್ಳಲಿದ್ದಾರೆ. ಇದಕ್ಕಾಗಿ ದೆಹಲಿಯ ಪ್ರಗತಿ ಮೈದಾನದಲ್ಲಿರುವ ಪ್ರತಿಷ್ಠಿತ ಭಾರತ್ ಮಂಟಪಂ ನಿರ್ಮಾಣವಾಗಿದ್ದು, ಇಲ್ಲೇ ಕಾರ್ಯಕ್ರಮ ಅನಾವರಣಗೊಳ್ಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!