ಸಮಸ್ತ ಕನ್ನಡಿಗರ ಆಸೆ ಇಂದು ನೆರವೇರುತ್ತಿದೆ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದಿಂದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನುನೀಡಲಾಗುತ್ತಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರರಾಗಿದ್ದಾರೆ.

ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದು, ಈ ವೇಳೆ ಪುನೀತ್ ಬಗ್ಗೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ.
ನಾಡಿನ ಸಮಸ್ತ ಪುನೀತ್ ಅಭಿಮಾನಿಗಳಿಗೆ ಧನ್ಯವಾದಗಳು, ಅಭಿಮಾನಿಗಳ ಆಸೆಯನ್ನು ಇಂದು ನೆರವೇರಿಸುತ್ತಿದ್ದೇವೆ, ಪುನೀತ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಬಹಳ ಸಂತಸವಾಗಿದೆ. ಇದು ಹೆಮ್ಮೆಯ ವಿಷಯವಾಗಿದ್ದು,ನಟ ಪುನೀತ್ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದರು. ಈ ಹಿಂದೆ ಡಾ. ರಾಜ್ ಈ ಪ್ರಶಸ್ತಿಗೆ ಭಾಜನರಾಗಿದ್ದರು, ಇದೀಗ ಅವರ ಮಗ ಪುನೀತ್ ಈ ಪ್ರಶಸ್ತಿ ಪಡೆಯುತ್ತಿದ್ದಾರೆ.

ಇದು ದೀರ್ಘಕಾಲ ನೆನಪಿಟ್ಟುಕೊಳ್ಳುವಂತಹ ರಾಜ್ಯೋತ್ಸವವಾಗಿದೆ. ಪುನೀತ್ ಇನ್ನಷ್ಟೂ ಸಾಕಷ್ಟು ಸೇವೆ ಮಾಡಬಹುದಿತ್ತು, ಆದರೆ ಅದು ಆಗಲಿಲ್ಲ. ಇಂದು ಸಮಸ್ತ ಕನ್ನಡ ಜನರ ಆಸೆಯನ್ನು ನೆರವೇರಿಸುತ್ತಿದ್ದೇವೆ, ನಾಡಿನ ಸಮಸ್ತ ಪುನೀತ್ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!