ಗೃಹಲಕ್ಷ್ಮೀ ಯೋಜನೆ ಹಣ ಕೂಡಿಸಿ ಫ್ರಿಡ್ಜ್‌ ಖರೀದಿಸಿದ ಮಹಿಳೆ: ಡಿಸಿಎಂ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ ಸರ್ಕಾರದ ಗ್ಯಾರೆಂಟಿ ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ಮಹಿಳೆಗೂ ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡಲಾಗಿದೆ.

ಈ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಫ್ರಿಡ್ಜ್‌ ಖರೀದಿ ಮಾಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಹಾವೇರಿಯ ಶಿಗ್ಗಾಂವಿ ನಿವಾಸಿ ಲತಾ ಎನ್ನುವವರು ಫ್ರಿಡ್ಜ್‌ ಖರೀದಿ ಮಾಡಿದ್ದಾರೆ. ಇದರ ಬಗ್ಗೆ ಡಿಕೆಶಿ ಟ್ವೀಟ್‌ ಮಾಡಿದ್ದು, ನಾವು ಮಾಡಿದ ಯೋಜನೆ ಸಾರ್ಥಕವಾಗಿದೆ ಎಂದು ಹೇಳಿದ್ದಾರೆ.

ಸಾರ್ಥಕತೆಯ ಭಾವ ಮೂಡಿದೆ, ರಾಜಕೀಯ ಮಾಡೋದಕ್ಕೆ ನಮ್ಮ ಗ್ಯಾರೆಂಟಿ ಬಗ್ಗೆ ಎಷ್ಟೊಂದು ಜನ ಕೆಟ್ಟದಾಗಿ ಮಾತನಾಡಿದ್ದರು. ಆದರೆ ಈ ರೀತಿ ಮಹಿಳೆಯರು ಹಣ ಕೂಡಿಟ್ಟು ಸದುಪಯೋಗ ಪಡಿಸಿಕೊಂಡಾಗ ಮನಸ್ಸಿಗೆ ಸಂತಸವಾಗುತ್ತದೆ. ಫ್ರಿಡ್ಜ್‌ ಬಂದ ದಿನ ಅವರ ಮನೆಯಲ್ಲಿ ಸಿಕ್ಕ ಖುಷಿ ಇನ್ನೆಲ್ಲಿ ಕಾಣುತ್ತದೆ ಹೇಳಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!