ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬರ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ 55 ಬ್ಯಾಟರಿಗಳನ್ನು ಹೊರತೆಗೆದಿದ್ದಾರೆ. ಡಬ್ಲಿನ್ನಲ್ಲಿರುವ ಈ ಮಹಿಳೆ ಖಿನ್ನತೆಯಿಂದ ಬಳಲುತ್ತಿದ್ದು, ಈ ನಿರ್ಧಾರಕ್ಕೆ ಬಂದಿದ್ದಾರೆ. ಒಂದೇ ಬಾರಿಗೆ ಅಷ್ಟೂ ಬ್ಯಾಟರಿಗಳನ್ನು ನುಂಗಿದ್ದಾರೆ.
ಬ್ಯಾಟರಿಗಳ ತೂಕದಿಂದ ಇವರ ಹೊಟ್ಟೆ ನೇತಾಡುತ್ತಿದ್ದು, ಸ್ಕ್ಯಾನಿಂಗ್ ಸಮಯದಲ್ಲಿ 55 ಬ್ಯಾಟರಿ ಇರುವುದು ತಿಳಿದಿದೆ. ಅದೃಷ್ಟವಶಾತ್ ಯಾವುದೇ ರೀತಿ ಹಾನಿಯಾಗಿಲ್ಲ. ಸ್ಕ್ಯಾನ್ನಲ್ಲಿ ಬ್ಯಾಟರಿಗಳನ್ನು ಕಂಡು ವೈದ್ಯರು ಆಶ್ಚರ್ಯಪಟ್ಟಿದ್ದಾರೆ. ಮಹಿಳೆಯ ಖಿನ್ನತೆಯಿಂದ ಆಕೆ ಜೀವ ಕಳೆದುಕೊಳ್ಳಲು ಈ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ನಿಮ್ಮ ಸುತ್ತಮುತ್ತ ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ ಅವರಿಗೆ ಸಹಾಯ ಮಾಡಿ, ಕುಳಿತು ಅವರೊಡನೆ ಎರಡು ಮಾತನಾಡಿ.