ವಾರ್ನಿಂಗ್ ಅನ್ನೋ ಪದ ನನ್ನ ಡಿಕ್ಷನರಿಲೇ ಇಲ್ಲ: ಎಂ.ಬಿ. ಪಾಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನನಗೆ ಯಾರೂ ವಾರ್ನ್ ಮಾಡಿಲ್ಲ, ವಾರ್ನಿಂಗ್ ಅನ್ನೋ ಪದ ನನ್ನ ಡಿಕ್ಷನರಿಲಿ ಇಲ್ಲ, ಬೇರೆಯವರಿಗೆ ವಾರ್ನಿಂಗ್ ಮಾಡ್ತೇನೆ ಹೊರತು ನನ್ಯಾರೂ ವಾರ್ನ್ ಮಾಡೋದಿಲ್ಲ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.

ಡಿ.ಕೆ. ಸುರೇಶ್ ಅವರು ನನಗೆ ವಾರ್ನಿಂಗ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ, ಇದು ಸುಳ್ಳು. ನನ್ನ ತಂದೆ ತಾಯಿಯೇ ಈವರೆಗೂ ನನಗೆ ವಾರ್ನಿಂಗ್ ಮಾಡಿಲ್ಲ. ವಾರ್ನಿಂಗ್ ಅನ್ನೋದೆಲ್ಲಾ ಸುಳ್ಳು ಎಂದಿದ್ದಾರೆ.

ಸುರೇಶ್ ಅವರು ನನ್ನನ್ನು ಪ್ರೀತಿಯಿಂದ ಪಾಟೀಲ್ರೇ ಎಂದು ಕರೆದ್ರು, ಆಮೇಲೆ ಮಾತಾಡೋಣ ಅಂದ್ರು, ನಮ್ಮ ಸಂಬಂಧ ಚೆನ್ನಾಗಿಯೇ ಇದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!