ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಾವೊ ಪಿಡಿಆರ್ (ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್) ದೇಶಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರ ಭೇಟಿಯ ಸಮಯದಲ್ಲಿ ಅಯೋಧ್ಯೆಯ ಶ್ರೀರಾಮಲಲಾ ದೇವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ.
ಲಾವೋಸ್ ದೇವರ ಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶವಾಗಿದೆ.
ಈ ಸ್ಟಾಂಪ್ ಸೆಟ್ ಎರಡು ವಿಭಿನ್ನ ಅಂಚೆಚೀಟಿಗಳನ್ನು ಒಳಗೊಂಡಿದೆ. ಒಂದು ಲಾವೋಸ್‌ನ ಪ್ರಾಚೀನ ರಾಜಧಾನಿ ಲುವಾಂಗ್ ಪ್ರಬಾಂಗ್‌ನಿಂದ ಭಗವಾನ್ ಬುದ್ಧನನ್ನು ಚಿತ್ರಿಸುತ್ತದೆ ಮತ್ತು ಇನ್ನೊಂದು ಭಾರತದ ಅಯೋಧ್ಯೆಯಿಂದ ಭಗವಾನ್ ಬಾಲರಾಮನನ್ನು ಪ್ರದರ್ಶಿಸುತ್ತದೆ.
ಈ ಅಂಚೆ ಚೀಟಿ ಬಿಡುಗಡೆಯು ವಿಶಿಷ್ಟವಾದ ಸಾಂಸ್ಕೃತಿಕ ಸಂಪರ್ಕವನ್ನು ಸಂಕೇತಿಸುವ ಬಾಲರಾಮನಿರುವ ವಿಶ್ವದ ಮೊದಲ ಅಂಚೆಚೀಟಿಯಾಗಿದೆ.
ಸಚಿವ ಎಸ್ ಜೈಶಂಕರ್ ಮತ್ತು ಲಾವೋಸ್ ವಿದೇಶಾಂಗ ಸಚಿವ ಸಲೆಮ್ಕ್ಸ್ ಕೊಮಾಸಿತ್ ಅವರ ಸಮ್ಮುಖದಲ್ಲಿ ಬೌದ್ಧ ಧರ್ಮ ಮತ್ತು ರಾಮಾಯಣದ ವಿಷಯದ ಕುರಿತು ಇರುವ ಈ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಈ ಅಂಚೆಚೀಟಿಯು ಲಾವೊ ಪಿಡಿಆರ್ ಮತ್ತು ಭಾರತದ ನಡುವೆ ಆಳವಾಗಿ ಬೇರೂರಿರುವ ನಾಗರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಎತ್ತಿ ತೋರಿಸುವಂತಿದೆ.