ಕಾಶ್ಮೀರದಲ್ಲಿನ ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌ ಈಗ ಹೇಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಕಾಶ್ಮೀರದ ಚೆನಾವ್‌ ನದಿಯ ಮೇಲೆ ನಿರ್ಮಾಣವಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಚಿತ್ರವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹಂಚಿಕೊಂಡಿದ್ದಾರೆ.
ಈ ರೈಲ್ವೆ ಸೇತುವೆ ನಿರ್ಮಾಣ ನಂತರ ಫೋಟೋವನ್ನು ಸಚಿವ ಅಶ್ವಿನಿ ವೈಷ್ಣವ್‌ ಹಂಚಿಕೊಂಡಿದ್ದು, ಮೋಡಗಳ ಮೇಲೆ ಸುಂದರವಾಗಿ ಕಾಣುತ್ತಿರುವ ವಿಶ್ವದ ಎತ್ತರದ ಚೆನಾಂಬ್‌ ರೈಲ್ವೆ ಸೇತುವೆ ಎಂದು ಬರೆದುಕೊಂಡಿದ್ದಾರೆ.

ಜಮ್ಮುಕಾಶ್ಮೀರದ ರೆಯಾಸಿ ಜಿಲ್ಲೆಯಲ್ಲಿ ಇದರ ಕಾಮಗಾರಿ ನಡೆದಿದ್ದು, ಕಾಶ್ಮೀರ ಕಣಿವೆ ನೇರ ರೈಲು ಕಲ್ಪಿಸುವ ಯೋಜನೆ ಈಗ ಸಜ್ಜಾಗಿದೆ.
ಇದೇ ವರ್ಷದ ಡಿಸೆಂಬರ್‌ ವೇಳೆಗೆ ಈ ರೈಲು ಮಾರ್ಗ ತನ್ನ ಸೇವೆ ಆರಂಭಿಸುವ ನಿರೀಕ್ಷೆ ಇದೆ.
ಈ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ನೆಲಮಟ್ಟಕ್ಕಿಂಯ 359 ಮೀಟರ್‌ ಎತ್ತರದಲ್ಲಿದ್ದು, ವಿಶ್ವವಿಖ್ಯಾತ ಐಫೆಲ್‌ ಟವರ್‌ ಗಿಂತಲೂ 35 ಮೀಟರ್‌ ಎತ್ತರದಲ್ಲಿ ಇದೆ.
ಗಂಟೆಗೆ 266 ಕಿಮೀ ವೇಗದಲ್ಲಿ ಬೀಸುವ ಗಾಳಿಯನ್ನು ಸಮರ್ಥವಾಗಿ ತಡೆಯುವ ಸಾಮರ್ಥ್ಯ ಈ ಸೇತುವೆಗೆ ಇದೆ.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಉದಾಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ (ಯುಎಸ್‌ಬಿಆರ್ಎಲ್) ಯೋಜನೆಯಡಿ 111 ಕಿ.ಮೀ ಉದ್ದದ ಸೇತುವೆ ನಿರ್ಮಾಣಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!