ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದೇ ಗುರುತಿಸಿಕೊಂಡ ಇರಾನಿನ ಅಮೌ ಹಾಜಿ ನಿಧನರಾಗಿದ್ದಾರೆ. 94 ವರ್ಷದ ಅಮೌ, ಇರಾನ್ ದಕ್ಷಿಣ ಪ್ರಾಂತ್ಯದ ಫಾರ್ಸ್ನ ಡೆಜ್ಗಾಹ್ ಗ್ರಾಮದಲ್ಲಿ ವಾಸವಿದ್ದರು.
ಬರೋಬ್ನರಿ 50 ವರ್ಷಕ್ಕೂ ಹೆಚ್ಚು ಕಾಲ ಸ್ನಾನ ಮಾಡದೆ ಉಳಿದಿದ್ದ ಇವರು, ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು.
ಸ್ನಾನ ಮಾಡಿದರೆ ಕಾಯಿಲೆ ಅಂಟಿಕೊಳ್ಳುತ್ತದೆ ಎಂದೇ ನಂಬಿದ್ದ ಅಮೌನನ್ನು ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ, ಗ್ರಾಮಸ್ಥರು ಸ್ನಾನಗೃಹಕ್ಕೆ ಕರೆದೊಯ್ದಿದ್ದರು.
ಈ ವ್ಯಕ್ತಿಯ ಕುರಿತಂತೆ 2013ರಲ್ಲಿ :ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ ಎನ್ನುವ ಕಿರುಚಿತ್ರ ಬಿಡುಗಡೆಯಾಗಿತ್ತು.