ಹೊಸದಿಂಗತ ಡಿಜಿಟಲ್ ಡೆಸ್ಕ್:
8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ವಿಮಾನ ಪತ್ತೆಯಾಗಿದೆ. AN-32 ವಿಮಾನವು 29 ಸಿಬ್ಬಂದಿಗಳನ್ನು ಹೊತ್ತೊಯ್ದು, ಜುಲೈ 22, 2016 ರಂದು ಚೆನ್ನೈನಿಂದ ಪೋರ್ಟ್ ಬ್ಲೇರ್‌ಗೆ ಹೊರಟಿತ್ತು.
ಬಂಗಾಳ ಕೊಲ್ಲಿಯಲ್ಲಿ ಟೇಕ್ ಆಫ್ ಆದ ಕೂಡಲೇ ವಿಮಾನ ನಾಪತ್ತೆಯಾಗಿದ್ದು, ವ್ಯಾಪಕ ಶೋಧ ಪ್ರಯತ್ನ ನಡೆಸಿದರೂ ವಿಮಾನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ವಿಮಾನದಲ್ಲಿದ್ದ 29 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. 8 ವರ್ಷಗಳ ಬಳಿಕ ಚೆನ್ನೈನ ಕರಾವಳಿ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಆಳ ಸಮುದ್ರದಲ್ಲಿ ನಾಪತ್ತೆಯಾಗಿರುವ ವಿಮಾನವನ್ನು ಹುಡುಕುತ್ತಿದ್ದ AUV ಗೆ ಅದನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಇದೀಗ ಚೆನ್ನೈ ಕರಾವಳಿಯಿಂದ 310 ಕಿ.ಮೀ ದೂರದಲ್ಲಿ ಅವಶೇಷಗಳು ಪತ್ತೆಯಾಗಿವೆ.