ಬಿಜೆಪಿ ಸಮಾವೇಶದ ನಂತರ ಗ್ರೌಂಡ್‌ ಕ್ಲೀನ್‌ ಮಾಡಿದ ಯದುವೀರ್‌ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಸಮಾವೇಶದ ನಡೆದಿತ್ತು.

ಗ್ರೌಂಡ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಭಾಷಣ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಒಟ್ಟಾರೆ ಅರವತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಮೈಸೂರು ಕೊಡಗು ಕ್ಷೇತ್ರದ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಮತಯಾಚನೆ ಮಾಡಿದ್ದರು. ಸಮಾವೇಶಕ್ಕೆ ಸಾವಿರಾರು ಹಾಜರಾಗಿದ್ದರು. ಸಮಾವೇಶದ ನಂತರ ಆ ಜಾಗದಲ್ಲಿ ಕಸ ಹೆಕ್ಕುವ ಮೂಲಕ ಯದುವೀರ್ ದಂಪತಿ ಗಮನ ಸೆಳೆದಿದ್ದಾರೆ.

ಜನರು ಸೇರಿದ್ದ ವೇಳೆ ನೀರಿನ ಬಾಟಲಿಗಳು, ತಿಂಡಿ ಕವರ್‌ಗಳು ಹೀಗೆ ಸಾಕಷ್ಟು ಕಸ ಸಂಗ್ರಹವಾಗಿತ್ತು. ಮಹಾರಾಜ ಕಾಲೇಜು ಮೈದಾನದಲ್ಲಿ ಇತರ ಕಾರ್ಯಕರ್ತರ ಜತೆ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ದಂಪತಿ ಶುಚಿತ್ವ ಕಾರ್ಯದಲ್ಲಿ ಭಾಗಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!