ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರಾಫಿಕ್ ನಿಯಮ ಉಲ್ಲಂಘಿಸಿ ಬೃಹತ್ ಮೊತ್ತ ನೋಡಿ ದಂಗಾದ ಸವಾರರಿಗೆ ಉತ್ತರ ಪ್ರದೇಶದ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ.
20217ರಿಂದ 2021ರ ವರೆಗೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಚಲನ್ ರದ್ದುಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶಿದೆ. ಇದು ಖಾಸಗಿ ಹಾಗೂ ವಾಣಿಜ್ಯ ವಾಹನಗಳಿಗ ಅನ್ವಯಿಸಲಿದೆ.
ಆದೇಶ ಪ್ರಕಾರ ಜನವರಿ 1, 2017 ರಿಂದ ಡಿಸೆಂಬರ್ 31, 2021ರ ವರೆಗಿನ ಎಲ್ಲಾ ಬಾಕಿ ಇರುವ ಚಲನ್ ರದ್ದುಗೊಳ್ಳಲಿದೆ. ಇದು ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವ ಪ್ರಕರಣಗಳಿಗೂ ಅನ್ವಯವಾಗಲಿದೆ.
ಖಾಸಗಿ ಹಾಗೂ ವಾಣಿಜ್ಯ ವಾಹನ ಮಾಲೀಕರಿಗೆ ರಿಲೀಫ್ ನೀಡಲು ಉತ್ತರ ಪ್ರದೇಶ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಯೋಗಿ ಆದಿತ್ಯನಾಥ್ ಸರ್ಕಾರದ ಈ ನಿರ್ಧಾರವನ್ನು ದಂಡ ಬಾಕಿ ಉಳಿಸಿಕೊಂಡಿದ್ದ ಲಕ್ಷಕ್ಕೂ ಅಧಿಕ ವಾಹನ ಮಾಲೀಕರು ಸ್ವಾಗತಿಸಿದ್ದಾರೆ.
ಸಾರಿಗೆ ಆಯುಕ್ತ ಚಂದ್ರಭೂಷಣ್ ಸಿಂಗ್ ಈ ಕರಿತು ಅಧಿಸೂಚನೆ ಹೊರಡಿಸಿದ್ದಾರೆ. ಎಲ್ಲಾ ಡಿವಿಶನ್ ಸಾರಿಗೆ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಿದ್ದಾರೆ. 2022ರ ಜನವರಿ 1 ರಿಂದ ಹೊರಡಿಸಿರುವ ಚಲನ್ ದಂಡ ಹಾಗೂ ಪ್ರಕರಣಗಳು ಹಾಗೇ ಇರಲಿದೆ. ಈ ಪ್ರಕರಣಗಳಲ್ಲಿ ವಾಹನ ಮಾಲೀಕರು ದಂಡ ಪಾವತಿಸಿ ಪ್ರಕರಣಕ್ಕೆ ಅಂತ್ಯ ಹಾಡಬಹುದು.