March 18, 2026
Wednesday, March 18, 2026
spot_img

ಯಾರ್ಕರ್ ಕಿಂಗ್ ಈಗ ವಿಕೆಟ್ ರೇಟಿಂಗ್ ಕಿಂಗ್: ಅಶ್ವಿನ್ ದಾಖಲೆ ಉಡೀಸ್ ಮಾಡಿದ ಬುಮ್ರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧದ ಇಂದಿನ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾದ “ಯಾರ್ಕರ್ ಕಿಂಗ್” ಜಸ್ಪ್ರೀತ್ ಬುಮ್ರಾ ಹೊಸ ಇತಿಹಾಸ ಬರೆದಿದ್ದಾರೆ.

ಹರಿಣಗಳ ವಿರುದ್ಧದ ಪಂದ್ಯದಲ್ಲಿ ಘಾತಕ ಬೌಲಿಂಗ್ ಪ್ರದರ್ಶಿಸಿದ ಬುಮ್ರಾ, ಕೇವಲ 15 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇದುವರೆಗೆ ಈ ದಾಖಲೆ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಹೆಸರಿನಲ್ಲಿತ್ತು. ಅಶ್ವಿನ್ 24 ಪಂದ್ಯಗಳಲ್ಲಿ 32 ವಿಕೆಟ್ ಪಡೆದಿದ್ದರು. ಆದರೆ, ಬುಮ್ರಾ ಕೇವಲ 22 ಪಂದ್ಯಗಳಲ್ಲೇ ಈ ಮೈಲಿಗಲ್ಲನ್ನು ದಾಟಿದ್ದಾರೆ. ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರ ವಿಕೆಟ್ ಪಡೆಯುವ ಮೂಲಕ ಬುಮ್ರಾ ತಮ್ಮ ಒಟ್ಟು ವಿಕೆಟ್‌ಗಳ ಸಂಖ್ಯೆಯನ್ನು 33ಕ್ಕೇರಿಸಿ ಅಗ್ರಸ್ಥಾನಕ್ಕೇರಿದ್ದಾರೆ.

ಒತ್ತಡದ ಪರಿಸ್ಥಿತಿಯಲ್ಲೂ ಚಾಣಾಕ್ಷ ಬೌಲಿಂಗ್ ಪ್ರದರ್ಶಿಸಿದ ಬುಮ್ರಾ, ಭಾರತದ ಬೌಲಿಂಗ್ ವಿಭಾಗದ ಬೆನ್ನೆಲುಬು ತಾನೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !