August 17, 2026
Monday, August 17, 2026
spot_img

ಮಹಿಳೆಗೆ ಕಿರುಕುಳ ನೀಡಿದ ಝೆಪ್ಟೋ ಡೆಲಿವರಿ ಬಾಯ್: ಐಡಿ ಬ್ಲಾಕ್ ಮಾಡಿ ಗೇಟ್ ಪಾಸ್ ನೀಡಿದ ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆನ್‌ಲೈನ್ ದಿನಸಿ ವಿತರಣಾ ಸಂಸ್ಥೆ ‘ಝೆಪ್ಟೋ’ ಕಂಪನಿಯ ಡೆಲಿವರಿ ಏಜೆಂಟ್ ಒಬ್ಬ ಗ್ರಾಹಕಿಗೆ ಮಾನಸಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಎಚ್ಚೆತ್ತ ಕಂಪನಿಯು ಆರೋಪಿ ವಿತರಕನ ಐಡಿಯನ್ನು ತಕ್ಷಣದಿಂದಲೇ ರದ್ದುಗೊಳಿಸಿ ಕೆಲಸದಿಂದ ವಜಾ ಮಾಡಿದೆ.

ನಡೆದಿದ್ದೇನು?:

ಮಹಿಳೆಯ ಹೇಳಿಕೆಯ ಪ್ರಕಾರ, ಆರ್ಡರ್ ತಲುಪಿಸಲು ಬಂದಿದ್ದ ಡೆಲಿವರಿ ಏಜೆಂಟ್ ಕುಡಿಯಲು ನೀರು ಕೇಳಿದ್ದನು. ಮಹಿಳೆ ಆತನಿಗೆ ನೀರಿನ ಬಾಟಲ್ ನೀಡಿ, ಅದನ್ನು ತನ್ನ ಬಳಿಯೇ ಇಟ್ಟುಕೊಳ್ಳುವಂತೆ ತಿಳಿಸಿದ್ದರು. ಆದರೆ ನೀರು ಕುಡಿದ ಬಳಿಕ ಮತ್ತೊಮ್ಮೆ ನೀರು ಕೇಳಿದ ಆತ, ಕೇವಲ 5 ನಿಮಿಷಗಳ ಕಾಲ ತನ್ನನ್ನು ಮನೆಯೊಳಗೆ ಬಿಟ್ಟುಕೊಳ್ಳುವಂತೆ ಪದೇ ಪದೇ ಒತ್ತಾಯಿಸಲು ಆರಂಭಿಸಿದ್ದಾನೆ.

ಬಾಗಿಲು ಬಡಿದು ಆತಂಕ ಸೃಷ್ಟಿ:

ಮಹಿಳೆ ಒಳಗೆ ಬರಲು ನಿರಾಕರಿಸಿ ಹೊರಗಡೆ ಕೂರಲು ಸಾಕಷ್ಟು ಜಾಗವಿದೆ ಎಂದು ಹೇಳಿದರೂ ಆತ ಕೇಳಲಿಲ್ಲ. ಮಹಿಳೆ ಗೇಟ್ ಮುಚ್ಚಲು ಯತ್ನಿಸಿದಾಗ ಆತ ನಿರಂತರವಾಗಿ ಡೋರ್‌ಬೆಲ್ ಬಾರಿಸಿದ್ದಾನೆ. ಇದರಿಂದ ಹೆದರಿದ ಮಹಿಳೆ ಮುಖ್ಯ ಬಾಗಿಲು ಹಾಕಿ ಒಳಗಡೆ ಉಳಿದಾಗ, ಆತ ಹೊರಗಿನ ಗೇಟನ್ನು ಜೋರಾಗಿ ಬಡಿಯಲು ಆರಂಭಿಸಿ ಆತಂಕ ಸೃಷ್ಟಿಸಿದ್ದಾನೆ.

ಇದನ್ನೂ ಓದಿ:

ಪೊಲೀಸ್ ದೂರು ನೀಡಿಲ್ಲ:

ಆರೋಪಿ ಡೆಲಿವರಿ ಏಜೆಂಟ್‌ನ ಯಾವುದೇ ವೈಯಕ್ತಿಕ ವಿವರಗಳು ತನ್ನ ಬಳಿ ಇಲ್ಲದ ಕಾರಣ ತಾನು ಪೊಲೀಸರನ್ನು ಸಂಪರ್ಕಿಸಿಲ್ಲ ಎಂದು ಮಹಿಳೆ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಝೆಪ್ಟೋ ಸಂಸ್ಥೆಯು ಆತನಿಗೆ ಮಹಿಳೆಯ ಮನೆ ಬಳಿ ಸುಳಿಯದಂತೆ ನಿರ್ಬಂಧಕಾಜ್ಞೆ ಹೊರಡಿಸಿದೆ. ಈ ಘಟನೆಯು ಆನ್‌ಲೈನ್ ಮೂಲಕ ಸಾಮಗ್ರಿ ತರಿಸಿಕೊಳ್ಳುವ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !