September 30, 2026
Wednesday, September 30, 2026
spot_img

ಭಟ್ಕಳದ ದೇವಸ್ಥಾನದಲ್ಲಿ ಕಳ್ಳತನ; 24 ಗಂಟೆಯಲ್ಲೇ ಆರೋಪಿ ಅರೆಸ್ಟ್, ಕದ್ದ ಚಿನ್ನಾಭರಣಗಳು ಜಪ್ತಿ

ಹೊಸದಿಗಂತ ವರದಿ ಭಟ್ಕಳ:

ಬೆಳಕೆ ಗ್ರಾಮದ ಗರಡಿಹಿತ್ಲು ಶ್ರೀ ಭಂಟಗೊಡ ದೇವಸ್ಥಾನದ ಕಳವು ಪ್ರಕರಣವನ್ನು ಬೇಧಿಸಿದ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಕಳುವಾದ ಬಂಗಾರ ಹಾಗೂ ಇತರೇ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವೀಯಾಗಿದ್ದಾರೆ.

ಸೆ.29ರಂದು ರಾತ್ರಿ ಅವಧಿಯಲ್ಲಿ ದೇವಸ್ಥಾನದ ಮುಂದಿನ ಬಾಗಿಲಿನ ಬೀಗ ಮುರಿದು ದೇವರ ಕುತ್ತಿಗೆಯಲ್ಲಿದ್ದ ಒಟ್ಟೂ ಸುಮಾರು 60 ಸಾವಿರ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದಲ್ಲಿ ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.

ತನಿಖಾ ತಂಡವು ಸಾಕ್ಷಾಧಾರಗಳನ್ನು ಹಾಗೂ ಸ್ಥಳೀಯರ ತನಿಖೆಯಿಂದ ಆರೋಪಿ ಹೆಬಳೆಯ ತಹಲಾ ಕಾಲೋನಿಯ ನಿವಾಸಿ ಸೈಯದ್ ಯುನುಸ್ ತಂದೆ ಸೈಯದ್ ಅಹಮ್ಮದ್ ಈತನನ್ನು ಬಂಧಿಸಿ ಆತನಿಂದ ಕಳುವಾದ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವೀಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಕಾರ್ಯಾಚರಣೆಯಲ್ಲಿ ಎಸ್.ಪಿ. ದೀಪನ್ ಎಮ್.ಎನ್., ಹೆಚ್ಚುವರಿ ಎಸ್.ಪಿ. ಕೃಷ್ಣಮೂರ್ತಿ, ಎ.ಎಸ್.ಪಿ. ರಾಣು ಗುಪ್ತಾ ಮಾರ್ಗದರ್ಶನದಲ್ಲಿ ನಗರ ಠಾಣೆಯ ಇನ್ಸಪೆಕ್ಟರ್ ದಿವಾಕರ ಪಿ.ಎಮ್, ಸೇರಿದಂತೆ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Must Read