ಕಳ್ಳತನ ಪ್ರಕರಣ: ಅಂಕೋಲಾ ಪೊಲೀಸರಿಂದ ಇಬ್ಬರ ಬಂಧನ

ಹೊಸದಿಗಂತ ವರದಿ, ಅಂಕೋಲಾ:

ತಾಲೂಕಿನಲ್ಲಿ ನಡೆದ ವಿವಿಧ ಬೈಕ್ ಕಳ್ಳತನ ಮತ್ತು ಮನೆ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಕುಖ್ಯಾತ ಕಳ್ಳರನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಕುಳೂರು ನಿವಾಸಿ ಹಾಲಿ ಸುರತ್ಕಲ್ ನಲ್ಲಿ ವಾಸವಾಗಿರುವ ಮಹಮ್ಮದ್ ಸಲ್ಮಾನ್ ಮಹಮ್ಮದ್ ಗೌಸ್ (29) ಮತ್ತು ಕಾರವಾರ ಕೋಡಿಬಾಗ ನಿವಾಸಿ ರೋಹಿತ್ ಹರಿಜನ್ ಬಂಧಿತ ಆರೋಪಿಗಳಾಗಿದ್ದು ಇವರು ಅಗಸ್ಟ್ 16 ರಂದು ಅಂಕೋಲಾ ಬಸ್ ನಿಲ್ದಾಣದ ಸಮೀಪ ನಿಲ್ಲಿಸಿಟ್ಟ ಅಂಕೋಲಾ ಬೊಬ್ರವಾಡ ನಿವಾಸಿ ಗಣಪತಿ ಶಿವು ನಾಯ್ಕ ಅವರಿಗೆ ಸೇರಿದ್ದ ಕೆ.ಎ30 ಎಲ್ 3080 ನೋಂದಣಿ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನ ಮಾಡಿದ್ದರು.

ಕಳೆದ ಕೆಲವು ದಿನಗಳ ಹಿಂದೆ ವಂದಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದತೆ ಬಂದಿತ ಆರೋಪಿ ರೋಹಿತ್ ಹರಿಜನ್ ಜೊತೆಗೆ ಕಳ್ಳತನದಲ್ಲಿ ಈ ಕುರಿತು ಇಬ್ಬರೂ ಸಹ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳು ಕಾರವಾರ ಕೋಡಿಬಾಗ ನದಿವಾಡದಲ್ಲಿ ಬೈಕ್ ಕಳ್ಳತನ, ಅಂಕೋಲಾ ತಾಲೂಕಿನ ವಂದಿಗೆ,ಶೆಟಗೇರಿ ಮತ್ತು ಜಮಗೋಡದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಇವರು ಇನ್ನೂ ಕೆಲವು ಕಡೆ ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆಸಿರುವುದಾಗಿ ತಿಳಿದು ಬಂದಿದೆ.

ಬಂಧಿತ ಆರೋಪಿತರಿಂದ ಅಂಕೋಲಾದಲ್ಲಿ ಕಳ್ಳತನ ಮಾಡಲಾದ 10 ಸಾವಿರ ರೂಪಾಯಿ ಮೌಲ್ಯದ ಬೈಕ್ ಮತ್ತು ಕಾರವಾರದಲ್ಲಿ ಕಳ್ಳತನ ಮಾಡಲಾಗಿದ್ದ 30 ಸಾವಿರ ರೂಪಾಯಿ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಡಿ.ವೈ.ಎಸ್. ಪಿ ವೆಲಂಟನ್ ಡಿಸೋಜ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರ ನೇತೃತ್ವದಲ್ಲಿ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್, ಜಯಶ್ರೀ ಪ್ರಭಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!