ಹೊಸದಿಗಂತ ವರದಿ ಮುಂಡಗೋಡ:
ಪಟ್ಟಣದಲ್ಲಿ ಮನೆ ಕಳ್ಳತನ ಮಾಡಿ ನಗದು ಸೇರಿದಂತೆ ಬಂಗಾರದ ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಎರಡು ಜನ ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿ ನ್ಯಾಯಾಲಕ್ಕೆ ಹಾಜರು ಮಾಡಿದ ಘಟನೆ ಜರುಗಿದೆ.
ಕಳ್ಳತನ ಮಾಡಿದ ಆರೋಪಿಗಳನ್ನು ಪಟ್ಟಣದ ಸುಭಾಶನಗರದ ಪ್ರವೀಣ ಭೋವಿ ಹಾಗೂ ಕ್ಯಾಸಿನಕೇರಿ ಗ್ರಾಮದ ರಾಕೇಶ ಹೆಬ್ಬಳ್ಳಿ ಎಂದು ಗುರುತಿಸಲಾಗಿದ್ದು.
ಇವರಿಬ್ಬರು ಸೇರಿಕೊಂಡು 27 ಜನವರಿ 2025 ರಂದು ಪಟ್ಟಣದ ವಡ್ಡರ ಓಣಿಯಲ್ಲಿರುವ ಮನೆಯ ಹಿಂದಿನ ಬಾಗಿಲನ್ನು ತೆಗೆದು ಮನೆಯ ಒಳಗಡೆ ಹೋಗಿ ಯಾವುದೋ ಗಟ್ಟಿಯಾದ ವಸ್ತುವಿನಿಂದ ಮನೆಯಲ್ಲಿದ್ದ ಟ್ರಜರಿಯ ಬಾಗಿಲುನ್ನು ಮುರಿದು ಟ್ರಜರಿಯಲ್ಲಿಟ್ಟಿದ್ದ 30 ಸಾವಿಸ ಬೆಲೆಬಾಳುವ 05 ಗ್ರಾಂ ಬಂಗಾರದ 32 ಗುಂಡುಗಳು ಇರುವ ಸರ್, 15 ಸಾವಿರ ರೂಪಾಯಿ ಬೆಲೆ ಬಾಳುವ 03 ಗ್ರಾಂ ತೂಕದ ಬಂಗಾರದ ಜಾಲರಿ 15 ಸಾವಿರ ರೂಪಾಯಿ ಬೆಲೆಬಾಳುವ ಒಂದು ಜೋತೆ ಬೆಂಡೋಲಿ ಸೇರಿದಂತೆ ಎರಡು ಸಾವಿರ ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ಸುಭಾಶನಗರದ ವಡ್ಡರ ಓಣೆಯ ತಿಪ್ಪವ್ವಾ ಬೋವಿ ಎಂಬುವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಿಸಿ ಕ್ಯಾಮರಾ ಸೇರಿದಂತೆ ಮಾಹಿತಿ ಕಲೆಹಾಕಿ ಆರೋಪೀತರಿಗೆ ದಸ್ತಗಿರಿ ಮಾಡಿ ದರೋಡೆ ಮಾಡಿದ 10 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಐ.ಪಿ.ಎಸ್, ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಜಗದೀಶ ನಾಯ್ಕ , ಶಿರಶಿ ಡಿ.ಎಸ್.ಪಿ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ ಇವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಪರಶುರಾಮ ಮಿರ್ಜಗಿ, ಹನುಮಂತ ಕುಡಗುಂಟಿ ಹಾಗೂ ಸಿಬ್ಬಂದಿಗಳಾದ ಮಂಜಪ್ಪ ಚಿಂಚಿಲಿ, ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.