ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನಲ್ಲಿ ಎಂಟೆಕ್ ಪದವೀಧರೆಯೊಬ್ಬಳು ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಹಿಂದು ಧರ್ಮಕ್ಕೆ ಮತಾಂತರಗೊಂಡ ಯುವತಿಯನ್ನು ಅಸ್ಸಾಂನ ರಂಗಿಯಾ ಮೂಲದ ರಜಿನಾ ಬೇಗಂ ಎಂದು ಗುರುತಿಸಲಾಗಿದೆ. ಇದೀಗ ಈಕೆಯ ನಿರ್ಧಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈಕೆ ತನ್ನದೇ ಧರ್ಮದ ಜಿಹಾದಿ ಚಟುವಟಿಕೆಗಳಿಂದ ಬೇಸತ್ತು ಹಿಂದು ಧರ್ಮವನ್ನು ಸ್ವೀಕರಿಸಿದ್ದಾಳೆ. ಅಸ್ಸಾಂನ ನಾಗಾಂವ್‌ನಲ್ಲಿರುವ ಶ್ರೀ ಜಖಲಬಂಧಿ ದೇವಸ್ಥಾನದಲ್ಲಿ ಅರ್ಚಕರ ಸಮ್ಮುಖದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ರೆಜಿನಾ ಸನಾತನ ಧರ್ಮವನ್ನು ಸ್ವೀಕರಿಸಿದರು.
ಸನಾತನ ಧರ್ಮದಲ್ಲಿರುವ ಆಚಾರ-ವಿಚಾರಗಳ ಮೇಲೆ ವಿಶೇಷ ಗೌರವ ಹೊಂದಿದ್ದ ರೆಜಿನಾ ಬೇಗಂ ಹಿಂದು ಧರ್ಮಕ್ಕೆ ಮತಾಂತರವಾಗಲು ಬಯಸಿದ್ದರು. ಕೊನೆಗೂ ತನ್ನ ಬಯಕೆ ಈಡೇರಿದೆ. ಹೋಮ, ಹವನ ಸೇರಿದಂತೆ ಹಿಂದು ಸಂಪ್ರದಾಯದಂತೆ ಘರ್ ವಾಪ್ಸಿ ಕಾರ್ಯಕ್ರಮವನ್ನು ನಡೆಸಲಾಯಿತು. ‘ರೆಜಿನಾ ಬೇಗಂ’ ಎಂದಿದ್ದ ಹೆಸರನ್ನು ‘ಅನನ್ಯ’ ಎಂದು ಬದಲಾಯಿಸಿಕೊಂಡರು.
ಇತ್ತ ಮತಾಂತರವಾಗಲು ಬಯಸಿದ ಯುವತಿಗೆ ಸಹಾಯ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಜುಗಲ್ ಚಂದ್ರ ದೇವ್ ಗೋಸ್ವಾಮಿ ಹೇಳಿದ್ದಾರೆ.
ಇನ್ನು ಹಿಂದು ಧರ್ಮಕ್ಕೆ ಸೇರಲು ಸಾವಿರ ಯುವಕರು ಕಾಯುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಜುಗಲ್ ಚಂದ್ರ ದೇವ್ ಗೋಸ್ವಾಮಿ ಹೇಳಿದರು.