ಭಾರತದಲ್ಲಿವೆ 39 ಅತ್ಯಂತ ಕಲುಷಿತ ನಗರಗಳು, ಏನು ಹೇಳುತ್ತಿದೆ S&P ಅಧ್ಯಯನ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಗತ್ತಿನ ಟಾಪ್ 100 ಅತ್ಯಂತ ಕಲುಷಿತ ನಗರಗಳಲ್ಲಿ ಭಾರತ ತನ್ನ ಪ್ರತಿಸ್ಪರ್ಧಿ ಚೀನಾಕ್ಕಿಂತ ಬಹಳ ಮುಂದಿದೆ. ಇತ್ತೀಚಿಗೆ S&P ಗ್ಲೋಬಲ್ ಮೊಬಿಲಿಟಿ ವೆಬ್ ಜಾಗತಿಕವಾಗಿ ಅತ್ಯಂತ ಕಲುಷಿತವಾಗಿರುವ ಟಾಪ್ 100 ನಗರಗಳನ್ನು ಗುರುತಿಸಿದೆ. ಇದರಲ್ಲಿ ಭಾರತದ 39 ನಗರಗಳಿವೆ. ಪ್ರತಿಸ್ಪರ್ಧಿ ಚೀನಾ 30 ನಗರಗಳನ್ನು ಹೊಂದಿದೆ.

ನೆರೆಯ ಪಾಕಿಸ್ತಾನವು ಏಳು ನಗರಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಐದು ಮತ್ತು ನೇಪಾಳ ಎರಡು ನಗರಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಆತಂಕಕಾರಿ ವಿಷಯವೇನೆಂದರೆ, ವಿಶ್ವದ ಅಗ್ರ 100 ಅತ್ಯಂತ ಕಲುಷಿತ ನಗರಗಳಲ್ಲಿ ಅರ್ಧಕ್ಕಿಂತ ಹೆಚ್ಚು (53 ನಗರಗಳು) ಭಾರತೀಯ ಉಪಖಂಡದಲ್ಲಿವೆ. ಭಾರತವು ಎಲೆಕ್ಟ್ರೀಕ್ ವಾಹನಗಳತ್ತ ಹೊರಳಬೇಕಾದ ಅಗತ್ಯವನ್ನುS&P ಅಧ್ಯಯನವು ಎತ್ತಿ ತೋರಿಸಿದೆ.

ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಬಗ್ಗೆ ಕಳವಳವನ್ನು ಸಹ ವ್ಯಕ್ತಪಡಿಸಿದೆ. ಸಂಚಾರ ದಟ್ಟಣೆಯಲ್ಲಿ ಪ್ರತಿ ಕಿಲೋಮೀಟರ್‌ಗೆ 430 ವಾಹನಗಳೊಂದಿಗೆ ಮುಂಬೈ ಅಗ್ರಸ್ಥಾನದಲ್ಲಿದೆ 308 ವಾಹನಗಳೊಂದಿಗೆ ಕೋಲ್ಕತ್ತಾ ಎರಡನೇ ಸ್ಥಾನ, ಪುಣೆ 248, ಮತ್ತು ದೆಹಲಿಯು ಪ್ರತಿ ಕಿಮೀಗೆ 93 ವಾಹನಗಳೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಬೆಂಗಳೂರಿನಲ್ಲಿ ತೀವ್ರ ಸಂಚಾರ ದಟ್ಟಣೆ ಸರಾಸರಿ ವಾಹನದ ವೇಗವನ್ನು ಗಂಟೆಗೆ ಕೇವಲ 10 ಕಿಮೀಗೆ ಇಳಿಸಿದೆ ಎಂದು ಅಧ್ಯಯನ ಹೇಳಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!