ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಆರು ಕಡೆಗಳಲ್ಲಿ ಬಾಂಬ್ ಇರುವುದಾಗಿ ಕಂಟ್ರೋಲ್ ರೂಂಗೆ ಕರೆ ಬಂದಿದೆ.
ಈ ಕರೆ ಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಕಂಟ್ರೋಲ್ ರೂಂ ಮುಂಬೈ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಕರೆ ಮಾಡಿದವರು ಯಾರು ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಪತ್ತೆಹಚ್ಚುತ್ತಿದ್ದಾರೆ. ಮುಂಬೈನಲ್ಲಿ ಕಂಟ್ರೋಲ್ ರೂಂಗೆ ಈ ಮೊದಲು ಕೂಡ ಅನಾಮಿಕ ಬೆದರಿಕೆ ಕರೆಗಳು ಬಂದಿವೆ.