ಅಯೋಧ್ಯೆ ‘ರಾಮಲಲಾ’ನ ವಿಗ್ರಹದಲ್ಲಿವೆ ಹಲವು ವಿಶೇಷತೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರದ ಗರ್ಭಗೃಹದಲ್ಲಿ ಇರಿಸಲಾದ ರಾಮಲಲಾನ ವಿಗ್ರಹದ ಮೊದಲ ಚಿತ್ರಗಳು ಹೊರಬಂದಿವೆ. ಶ್ರೀರಾಮನ ವಿಗ್ರಹ ಹಲವು ವಿಶೇಷತೆಗಳಿಂದ ಕೂಡಿದೆ.

ಇಂದು ಬಾಲರಾಮನ ವಿಗ್ರಹದ ಫೋಟೋ ಹೊರಬೀಳುತ್ತಿದ್ದಂತೆಯೇ ರಾಮಭಕ್ತರು ತಮ್ಮ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಜೈ ಶ್ರೀ ರಾಮ್‌ ಎಂದು ಬರೆದುಕೊಂಡರು.

ರಾಮಲಲಾನ ವಿಗ್ರಹವನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. 51 ಇಂಚಿನ ರಾಮ್ ಲಲ್ಲಾ ವಿಗ್ರಹವು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಶಾಲಿಗ್ರಾಮ್ ಕಲ್ಲಿನಿಂದ ಮಾಡಲಾಗಿದೆ. ಬಾಲ ರಾಮನು ಕಾಲಿಗೆ ಗೆಜ್ಜೆ, ಹೊಯ್ಸಳ ಶೈಲಿಯ ಆಭರಣ ಕೆತ್ತನೆ ಉತ್ತರ ಭಾರತ ಶೈಲಿಯಲ್ಲಿ ಧೋತಿ ತೊಟ್ಟಿದ್ದಾನೆ.

ಐದು ವರ್ಷ ಬಾಲಕನ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿ ಪ್ರತಿಮೆಯ ಎತ್ತರ 51 ಇಂಚು. ಅಂದರೆ ಸುಮಾರು 4 ಅಡಿ. ಕೈಯಲ್ಲಿ ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದ್ದಾನೆ.

ರಾಮನ ಬಲಭಾಗದಲ್ಲಿ ನಿಂತಿರುವ ಹನುಮಂತ, ಮತ್ಸ್ಯ, ಕೂರ್ಮಾ, ನರಸಿಂಹ,ವಾಮನ, ಭ್ರಹ್ಮ, ಓಂ, ಆದಿಶೇಷ, ಚಕ್ರ, ಈಶ್ವರ ಬಲಭಾಗದಲ್ಲಿ ಗರುಡ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರ ಬಿಂಬಿಸುವ ಕೆತ್ತನೆ ಇದೆ. ಬಾಲರಾಮನ ಎಡಗಡೆ ಮೇಲ್ಗಡೆ ಶಂಕ,ಗಧೆ, ಸ್ವಸ್ತಿಕ್​​, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ, ನೆತ್ತಿಯ ಮೇಲೆ ಸೂರ್ಯನಿದ್ದಾನೆ.

ವಿಗ್ರಹ ಕೆತ್ತನೆಗೆ ಶ್ಯಾಮ ಶಿಲೆ ಬಳಸಲಾಗಿದ್ದು, ವಯಸ್ಸು ಸಾವಿರಾರು ವರ್ಷಗಳು, ಇದು ನೀರು ನಿರೋಧಕವಾಗಿದೆ.

ಶ್ರೀಗಂಧ ಮತ್ತು ರೋಲಿಯನ್ನು ಹಚ್ಚುವುದರಿಂದ ವಿಗ್ರಹದ ಹೊಳಪು ಮಾಸುವುದಿಲ್ಲ. ಪ್ರತಿಮೆಯ ಮೇಲೆ ಕಿರೀಟ ಮತ್ತು ಪ್ರಭಾವಲಯ ಇರುತ್ತದೆ.

ವಿಶೇಷತೆ ಎಂದರೆ ಶ್ರೀರಾಮನ ತೋಳುಗಳು ಮೊಣಕಾಲುಗಳವರೆಗೆ ಉದ್ದವಾಗಿವೆ. ಸುಂದರವಾದ ದೊಡ್ಡ ಕಣ್ಣುಗಳು, ಭವ್ಯವಾದ ಹಣೆ ಈ ಪ್ರತಿಮೆಯ ಆಕರ್ಷಿಯವಾಗಿದೆ.

ರಾಮಲಲಾನ ಪ್ರಾಣ ಪ್ರತಿಷ್ಠೆ ಜನವರಿ 22ಕ್ಕೆ ನಡೆಯಲಿದೆ. ರಾಮ ಮಂದಿರದ ಗರ್ಭಗುಡಿಯ ಕೂರ್ಮಪೀಠದಲ್ಲಿ ಬಾಲರಾಮನ ವಿಗ್ರಹವನ್ನು ಇಂದು (ಜ.18) ಕೂರಿಸಲಾಗುತ್ತದೆ. ಬಾಲರಾಮ ವಿಗ್ರಹ ಮೊದಲ ನೋಟ ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!