Thursday, December 8, 2022

Latest Posts

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಇಷ್ಟೆಲ್ಲಾ ಲಾಭ ಇದೆ..

ಹಬ್ಬಹರಿದಿನಗಳಲ್ಲಿ ಬಾಳೆದೆಲೆಯಲ್ಲಿ ಊಟ ಮಾಡುವ ಅಭ್ಯಾಸ ಎಲ್ಲೆಡೆ ಇದೆ, ಬಾಳೆದೆಲೆ ಸಿಗದೇ ಇದ್ದರೆ ಯಾರ ಮನೆಗಾದರೂ ಹೋಗಿ ತೆಗೆದುಕೊಂಡು ಅದರಲ್ಲೇ ದೇವರಿಗೆ ಎಡೆ ಇಟ್ಟು ಪೂಜೆ ಮಾಡುತ್ತೇವೆ. ಮದುವೆ ಮನೆಗಳಲ್ಲಿಯೂ ಊಟಕ್ಕೆ ಬಾಳೆದೆಲೆಯೇ ಬೇಕಿದೆ. ಬಾಳೆದೆಲೆಯಲ್ಲಿ ತಿಂದರೆ ಏನೆಲ್ಲಾ ಲಾಭ ನೋಡಿ..

  • ಬಾಳೆದೆಲೆಯ ಗಾರ ದೊಡ್ಡದು, ಮಾಡಿದ ಅಡುಗೆಯನ್ನಷ್ಟೂ ಎಲೆಗೆ ಬಡಿಸಿದರೂ ಇನ್ನೂ ಜಾಗ ಇರುತ್ತದೆ. ಊಟ ಮಾಡುವವರಿಗೆ ಇದು ತೃಪ್ತಿ ನೀಡುತ್ತದೆ.
  • ತಟ್ಟೆಗಳು ಹಾಗೂ ಇತರೆ ಎಲೆಗಳಿಗೆ ಹೋಲಿಸಿದರೆ ಬಾಳೆದೆಲೆ ಅಷ್ಟು ದುಬಾರಿಯಲ್ಲ.
  • ನೀರು ಚಲ್ಲಿದರೆ ಎಲೆಯಿಂದ ಕೆಳಕ್ಕೆ ಹರಿಯದು, ವಾಟರ್‌ಪ್ರೂಫ್ ಎಲೆಗಳಿವು.
  • ಬಾಳೆದೆಲೆಯಲ್ಲಿ ಬಿಸಿಯ ಆಹಾರ ಬಿದ್ದಾಗ, ಬಾಳೆದೆಲೆಯ ರುಚಿ ಕೂಡ ಊಟಕ್ಕೆ ಸೇರುತ್ತದೆ. ಇನ್ನಷ್ಟು ಊಟ ಘಂ ಎನ್ನುತ್ತದೆ.
  • ಬಾಳೆದೆಲೆಯಲ್ಲಿ ಆಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿವೆ. ಆಹಾರದಲ್ಲಿರುವ ಜೆರ್ಮ್ಸ್‌ಗಳನ್ನು ಇದು ಕೊಲ್ಲುತ್ತದೆ. ಪಾರ್ಕಿನ್‌ಸನ್ ರೋಗದಿಂದ ಬಳಲುತ್ತಿರುವವರೂ ಬಾಳೆದೆಲೆಯಲ್ಲಿ ಊಟ ಮಾಡಿ.
  • ಪರಿಸರ ಹಾಳು ಮಾಡುವ ಪ್ಲಾಸ್ಟಿಕ್ ಬದಲು ಬಾಳೆದೆಲೆ ಬಳಸಿದರೆ, ಭೂಮಿಗೆ ತೊಂದರೆಯಿಲ್ಲ.
  • ತಟ್ಟೆಗಿಂತ ಬಾಳೆದೆಲೆ ಸ್ವಚ್ಛ
  • ಬಾಳೆದೆಲೆಯಲ್ಲಿ ಯಾವುದೇ ಕೆಮಿಕಲ್ ಇಲ್ಲ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!