ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಂಸದೆ ಹಾಗೂ ನಟಿ ಸುಮಲತಾ ಬಹುಭಾಷಾ ನಟಿಯಾಗಿದ್ದವರು. ಸುಮಲತಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. ಸುಮಲತಾ ಮಲಯಾಳಂ ಚಿತ್ರರಂಗದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜಕೀಯಕ್ಕೆ ಬಂದ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದ ಅವರು ಇತ್ತೀಚೆಗೆ ಮಲಯಾಳಂ ಚಿತ್ರಗಳ ಭೀಕರತೆಯ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ನಾನು ಮಲಯಾಳಂ ಚಿತ್ರರಂಗದಲ್ಲಿದ್ದಾಗ ನನಗೆ ಒಂದೇ ಒಂದು ಕೆಟ್ಟ ಅನುಭವ ಆಗಿರಲಿಲ್ಲ. ಆದರೆ ನಾನು ಇತರ ನಟಿಯರೊಂದಿಗೆ ನಡೆದಿರುವ ಕೆಟ್ಟ ಅನುಭವಗಳ ಕಥೆಗಳನ್ನು ಕೇಳಿದ್ದೇನೆ. ಕೆಲ ನಟಿಯರು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡರು ಎಂದು ಸೋಮಲಿತಾ ಹೇಳಿದ್ದಾರೆ.
ಚಲನಚಿತ್ರೋದ್ಯಮದಲ್ಲಿ ಯಾವಾಗಲೂ ‘ಪವರ್ ಗ್ರೂಪ್’ಗಳು ಗುಂಪುಗಾರಿಕೆ ಇದ್ದೇ ಇರುತ್ತವೆ. ಚಿತ್ರೋದ್ಯಮದಲ್ಲಿ ಮಹಿಳೆಯರ ಸುರಕ್ಷತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದರು.