April 11, 2026
Saturday, April 11, 2026
spot_img

ಕಟ್ಟಿಗೆ ಒಲೆಗಳಿಗೆ ಭಾರೀ ಡಿಮ್ಯಾಂಡ್‌, ಕಾಲಕ್ಕೆ ತಕ್ಕಂತೆ ಅಡ್ಜಸ್ಟ್‌ ಆಗಲೇಬೇಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದೆಲ್ಲೆಡೆ ಗ್ಯಾಸ್‌ ಸಿಗದಿದ್ರೆ ಏನು ಮಾಡೋದು ಅನ್ನೋ ಚಿಂತೆಯಾದ್ರೆ ಇತ್ತ ಸೈಲೆಂಟ್‌ ಆಗಿ ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡ್‌ ಬಂದಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೊಟೇಲ್‌ ಮಾಲೀಕರು ತಮ್ಮ ದುಡಿಮೆ ಉಳಿಸಿಕೊಳ್ಳೋದಕ್ಕೆ ಕಟ್ಟಿಗೆ ಒಲೆ ಬಳಕೆಗೆ ನಿರ್ಧರಿಸಿದ್ದಾರೆ.

ಇಷ್ಟು ದಿನ ಜನ ಕ್ಯಾರೆ ಎನ್ನದೆ ಬಿದ್ದಿದ್ದ ಕಟ್ಟಿಗೆ ಒಲೆಗಳು ಇದೀಗ ಫುಲ್‌ ಡಿಮ್ಯಾಂಡ್‌ನಲ್ಲಿವೆ. ಗ್ಯಾಸ್‌ ಸಿಗಲಿ ಬಿಡಲು ನಾವು ಮಾಡುವ ಕೆಲಸ ಮಾಡುತ್ತೇವೆ ಎಂದು ಹೊಟೇಲ್‌ ಉದ್ಯಮ ಪಣತೊಟ್ಟಿದ್ದು, ಅಡುಗೆ ಆರಂಭಿಸಿವೆ.

ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ನಗರದ ಎಂಜಿ ಮಾರ್ಕೆಟ್‌ನಲ್ಲಿ ಕಟ್ಟಿಗೆ ಒಲೆಗಳ ಬೇಡಿಕೆ ಅನಿರೀಕ್ಷಿತವಾಗಿ ಏರಿಕೆಯಾಗಿದೆ. ಈ ಹಿಂದೆ ಯಾರೂ ಖರೀದಿಸದ ಕಟ್ಟಿಗೆ ಒಲೆಗಳಿಗೆ ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಹೋಟೆಲ್ ಮಾಲೀಕರು ಸಾಲುಗಟ್ಟಿ ನಿಂತು ಖರೀದಿ ಮಾಡುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !