June 8, 2026
Monday, June 8, 2026
spot_img

ದಿನಭವಿಷ್ಯ: ಇಂದು ಹೊಟ್ಟೆ ಕೆಡುವ ಸಾಧ್ಯತೆ ಇದೆ, ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ

ಮೇಷ
ಹೊರಗಿನ ವ್ಯವಹಾರದಲ್ಲಿ ಹೆಚ್ಚ್ಚು ವ್ಯಸ್ತ. ಆರ್ಥಿಕ ಸ್ಥಿರತೆ. ದಂಪತಿಗಳಿಗೆ ಶುಭ ಬೆಳವಣಿಗೆ. ಉಪಯುಕ್ತ ವಸ್ತು ಖರೀದಿ ಸಂಭವ.        
ವೃಷಭ
 ಹೊಟ್ಟೆ ಕೆಡುವ ಸಾಧ್ಯತೆ. ಆಹಾರದಲ್ಲಿ ಎಚ್ಚರ ವಹಿಸಿ. ಸಂಗಾತಿ ಜತೆ ಭಿನ್ನಾಭಿಪ್ರಾಯ. ದೇಹಾಭ್ಯಾಸ ಅತಿಯಾಗಿ ಮಾಡಬೇಡಿ.              
ಮಿಥುನ
ನಿಲ್ಲಿಸಿದ್ದ ಯೋಜನೆ ಅಥವಾ ಕಾರ್ಯಕ್ಕೆ ಮರುಚಾಲನೆ ನೀಡಿ. ಅನ್ಯರ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರಿ. ಕೌಟುಂಬಿಕ ಸಾಮರಸ್ಯ.  
ಕಟಕ
 ಇತರರ ಜತೆ ಮಾತನಾಡುವಾಗ ತಾಳ್ಮೆ ವಹಿಸಿ. ಸಣ್ಣ ವಿಷಯಕ್ಕೆ ರೇಗದಿರಿ. ಬಂಧುಗಳ ಜತೆ ಪ್ರವಾಸ ಹೋಗುವ ಅವಕಾಶ ಸಿಗಲಿದೆ.      
ಸಿಂಹ
 ಮನಸ್ಥಿತಿ ಏರುಪೇರು ಮಾಡುವ ಬೆಳವಣಿಗೆ. ಎಲ್ಲವನ್ನು ಸರಿತೂಗಿಸಿಕೊಂಡು ಹೋಗಿ. ಅನ್ಯರ ಟೀಕೆಗೆ  ಬೆಲೆ ಕೊಡಬೇಡಿ.  
ಕನ್ಯಾ
 ಸಂಗಾತಿ ಜತೆ ಪ್ರಾಮಾಣಿಕತೆಯಿಂದ ವರ್ತಿಸಿ. ಮುಚ್ಚುಮರೆ ಬೇಡ. ವೃತ್ತಿಯಲ್ಲಿ ತೊಡಕು. ಗಮನವಿಟ್ಟು ಕಾರ್ಯ ನಿರ್ವಹಿಸಿ.
 ತುಲಾ
ವೃತ್ತಿಯಲ್ಲಿ ಹೊಸ ಸವಾಲು. ಧೃತಿಗೆಡಬೇಡಿ. ಆರ್ಥಿಕ ನಷ್ಟವಾದೀತು. ಖರ್ಚು ಕಡಿಮೆ ಮಾಡಲು ಗಮನ ಕೊಡಿ. ಬಂಧು ಜತೆ ವಿರಸವಾದೀತು.      
ವೃಶ್ಚಿಕ
 ಆರ್ಥಿಕ ಸ್ಥಿರತೆ, ವ್ಯವಹಾರ ಹಿಗ್ಗಿಸಲು ಅವಕಾಶ.  ಕೌಟುಂಬಿಕ ವಿಚಾರದಲ್ಲಿ ತುಸು ಚಿಂತೆ.  ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯ.
ಧನು
ಲಾಭವೂ ಇಲ್ಲದ ನಷ್ಟವೂ ಇಲ್ಲದ ದಿನ. ಹಣ ಗಳಿಕೆಯ ಸುಲಭ ದಾರಿಗೆ ಹೋಗದಿರಿ. ಆಪ್ತರೊಬ್ಬರು ಮನಸ್ಸಿಗೆ ನೆಮ್ಮದಿ, ಸಂತೋಷ ತರುವರು.        
ಮಕರ
 ಸಹೋದ್ಯೋಗಿ ಜತೆ ಎಚ್ಚರದಿಂದ ವ್ಯವಹರಿಸಿ. ಜಗಳ, ಭಿನ್ನಮತ ಉಂಟಾದೀತು. ದೀರ್ಘಾವಽ ಯೋಜನೆಗೆ ಹಣ ಹೂಡಬೇಡಿ.        
ಕುಂಭ
ಸ್ವಂತ ವ್ಯವಹಾರ ಆರಂಭಿಸಲು ಕಾಲ ಸೂಕ್ತವಾಗಿದೆ.  ಜಡತ್ವ ಬಿಟ್ಟು ಕೆಲಸ ಮಾಡಿ.   ಆರ್ಥಿಕ ಒತ್ತಡ ನಿವಾರಣೆ, ಧನಾಗಮ.
ಮೀನ
 ಮನೆಯವರ ಜತೆ ಅನುನಯದಿಂದ ವರ್ತಿಸಿ.  ಕೋಪತಾಪ ಬೇಡ. ಮಕ್ಕಳು ಹಠಮಾರಿ ಧೋರಣೆ ತೋರುವರು. ಸಂಯಮವಿರಲಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !