ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುವನಂತಪುರಂನಲ್ಲಿರುವ ಅಟುಕಲ್ ಭಗವತಿ ಕ್ಷೇತ್ರವೂ ಅತ್ಯಂತ ಪ್ರಸಿದ್ಧಿ ಪಡೆದ ದೇವಿ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಮಹಿಳೆಯರ ಶಬರಿಮಲೆ ಎಂದೂ ಕರೆಯುತ್ತಾರೆ. ವರ್ಷದಲ್ಲಿ 10 ದಿನಗಳ ಕಾಲ ಇಲ್ಲಿ ದೇವಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ.
ದೇವಿ ಸೇವೆಯಲ್ಲಿ ಅಟುಕಲ್ ಪೊಂಗಲ್ ಇಲ್ಲಿನ ಅತ್ಯಂತ ವಿಶಿಷ್ಟ ಮತ್ತು ಪ್ರಸಿದ್ಧಿ ಪಡೆದ ಸೇವೆಯಾಗಿದೆ. ಈ ಸೇವೆಯ ಮುಖ್ಯ ಆಕರ್ಷಣೆ ಮಹಿಳೆಯರೆಲ್ಲಾ ಸೇರಿ ಕ್ಷೇತ್ರದ ಸುತ್ತಮುತ್ತ ಅಡುಗೆ ಮಾಡಿ, ಅದನ್ನು ದೇವಿಗೆ ಸಮರ್ಪಿಸುತ್ತಾರೆ.
ಲಕ್ಷಾಂತರ ಸಂಖ್ಯೆಯಲ್ಲಿ ಮಹಿಳೆಯರು ಈ ಅಡುಗೆ ಸೇವೆಯಲ್ಲಿ ಭಾಗಿಯಾಗುವ ಕಾರಣ ಅಡುಗೆಯ ಸಾಲು ಕ್ಷೇತ್ರವನ್ನು ದಾಟಿ ರಸ್ತೆ ಬದಿಯವರೆಗೂ ವಿಸ್ತರಿಸುತ್ತದೆ. ವಿಶೇಷವೆಂದರೆ ಭಕ್ತರು ತಾವು ದೇವಿಯ ಮುಂದೆ ಬೇಡಿದ ಬೇಡಿಕೆಗಳು ಈಡೇರಿದ ಬಳಿಕವೇ ಈ ಅಟುಕಲ್ ಪೊಂಗಲ್ ಸೇವೆಯನ್ನು ನೆರವೇರಿಸುತ್ತಾರೆ.